ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಬಾಣಂತಿ ಸಾವು..!

ಮಂಗಳೂರು: ಬಾಣಂತಿಯೋರ್ವರು ಲೇಡಿಗೋಷನ್‌ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟ ಘಟನೆ ನ.11 ರಂದು ಸೋಮವಾರ ಬೆಳಗ್ಗೆ ನಡೆದಿದೆ.

ಮೃತಪಟ್ಟವರು ಕಾರ್ಕಳ ರಂಜಿತಾ (28) ಎಂದು ತಿಳಿದು ಬಂದಿದೆ.ಮಹಿಳೆ ಹೆರಿಗೆಗಾಗಿ ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಮಹಿಳೆಗೆ ಹಲವು ಆರೋಗ್ಯ ಸಮಸ್ಯೆಯಿಂದ ಲೇಡಿಗೋಷನ್‌ ಗೆ ಅ.28ಕ್ಕೆ ದಾಖಲಿಸಲಾಗಿತ್ತು. ಅವರಿಗೆ ಅ.30ಕ್ಕೆ ಸಿಸೇರಿಯನ್‌ ಹೆರಿಗೆಯಾಗಿತ್ತು.ಆದರೆ ಮಗು ಐಸಿಯುನಲ್ಲಿತ್ತು. ನ.೩ಕ್ಕೆ ಮಗು ಮೃತಪಟ್ಟಿತ್ತು. ಮಹಿಳೆ ಗುಣಮುಖರಾಗಿ ಸೋಮವಾರ ಡಿಸ್ಚಾರ್ಜ್‌ ಗೆಂದು ವೈದ್ಯರು ಸೂಚಿಸಿದ್ದರು.

ಆದರೆ ಡಿಸ್ಚಾರ್ಜ್‌ಗೂ ಮೊದಲೇ ಮಹಿಳೆ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಕೂಡಲೇ ಮಹಿಳೆಯನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿದ್ದಾರೆ.

Leave a Reply