ʻಗೃಹಲಕ್ಷ್ಮಿʼ ಹಣ ಜಮಾ ಆಗದೇ ಇದ್ದವರು ತಪ್ಪದೇ ʻNPCIʼ ಚೆಕ್‌ ಮಾಡಿಕೊಳ್ಳಿ

ರಾಜ್ಯ ಸರ್ಕಾರವು ಯಜಮಾನಿಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಜೂನ್‌ ತಿಂಗಳ ಗೃಹಲಕ್ಷ್ಮಿ ಹಣವನ್ನು ಯಜಮಾನಿಯರ ಖಾತೆಗೆ ಜಮಾ ಮಾಡಿದ್ದು, ಹಣ ಬಾರದೇ ಇರುವವರು ತಪ್ಪದೇ ಎನ್‌ ಪಿಸಿಐ ಸಕ್ರಿಯವಾಗಿದೆಯೇ ಎಂಬುದನ್ನು ಚೆಕ್‌ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

 

ಇಲ್ಲಿಯವರೆಗೂ ಗೃಹಲಕ್ಷ್ಮೀ ಹಣ ಜಮಾ ಆಗದೇ ಇದ್ದವರು ಎನ್‍ಪಿಸಿಐ ಸಕ್ರಿಯವಾಗಿದೆಯೇ ಎಂಬುದನ್ನು ಸಾರ್ವಜನಿಕರು ಪರಿಶೀಲಿಸಿಕೊಳ್ಳಬೇಕು. ಒಮ್ಮೆ ಬ್ಯಾಂಕ್ ಮತ್ತು ಆಧಾರ್ ಜೋಡಣೆಗೆ ಇ-ಕೆವೈಸಿ ಮಾಡಿಸಿದಲ್ಲಿ ಪದೇ ಪದೇ ಮಾಡಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ.

ಖಾತೆಗೆ ಹಣ ಜಮಾ ಆಗಿರುವುದನ್ನು ತಿಳಿಯಲು ಈ ರೀತಿ ಚೆಕ್‌ ಮಾಡಿಕೊಳ್ಳಿ

ಮೊದಲಿಗೆ ಇ-ಆಡಳಿತ ಇಲಾಖೆಯಿಂದ ಅಭಿವೃದ್ದಿಪಡಿಸಿರುವ ʻDBT Karnatakaʼ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್‌ ಮಾಡಿಕೊಳ್ಳಬೇಕು.

ಮೊದಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಧಿಕೃತ DBT Karnataka mobile app ಅನ್ನು ಡೌನ್ಲೋಡ್ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು.

ಅರ್ಜಿದಾರರು ತಮ್ಮ 12 ಅಂಕಿಯ ಆಧಾರ್ ಕಾರ್ಡ ಸಂಖ್ಯೆಯನ್ನು ಹಾಕಿ ನಿಮ್ಮ ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ನಮೂದಿಸಬೇಕು.

4 ಅಂಕಿಯ ಪಾಸ್ವರ್ಡ್ ರಚನೆ ಮಾಡಿ ನಮೂದಿಸಬೇಕು.

ಬಳಿಕಕೊನೆಯ ಕಾಲಂ ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ “ಸರಿ” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಬೇಕು.

“ಲಾಗಿನ್/Login” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ “ಪಾವತಿ ಸ್ಥಿತಿ/Payment status” ಬಟನ್ ಮೇಲೆ ಕ್ಲಿಕ್ ಮಾಡಿ “ಗೃಹಲಕ್ಷ್ಮಿ” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಯಡಿ ಪ್ರತಿ ತಿಂಗಳು ಯಾವ ಯಾವ ದಿನಾಂಕ ದಂದು ಹಣ ಜಮಾ ಅಗಿದೆ. ಯು.ಟಿ.ಆರ್ ನಂಬರ್, ಬ್ಯಾಂಕಿನ ಹೆಸರು, ಬ್ಯಾಂಕ್ ಅಕೌಂಟಿನ ಕೊನೆಯ ನಾಲ್ಕು ಸಂಖ್ಯೆ, ಬ್ಯಾಂಕ್ ಖಾತೆದಾರರ ಹೆಸರಿನ ವಿವರ ತೋರಿಸುತ್ತದೆ.

Leave a Reply