October 12, 2025
WhatsApp Image 2023-09-14 at 8.24.35 AM

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಕಂಬಳ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಂಬಳ ಸಮಿತಿಯ ಪ್ರಥಮ ಸಭೆಯನ್ನು ಸೆ. 18ರ ಅಪರಾಹ್ನ 3ಕ್ಕೆ ಮೂಡುಬಿದಿರೆ ಕೋಟಿ ಚೆನ್ನಯ ಕಂಬಳ ಕರೆಯ ಬಳಿಯ ಸೃಷ್ಟಿ ಗಾರ್ಡನ್‌ನಲ್ಲಿ ಕಂಬಳ ಸಮಿತಿಯ ನೂತನ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ ಎಂದು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಸಭೆಯಲ್ಲಿ ಮುಂದಿನ ಕಂಬಳಗಳ ದಿನಾಂಕಗಳನ್ನು ಅಂತಿಮ ಗೊಳಿಸಲಾಗುವುದು ಮತ್ತು ಬೆಂಗಳೂರಲ್ಲಿ ನಡೆಯಲಿರುವ ಕಂಬಳದ ಬಗ್ಗೆ ಚರ್ಚಿಸಲಾಗುವುದು. ಕಂಬಳ ವ್ಯವಸ್ಥಾಪಕರು, ಕೋಣಗಳ ಯಜಮಾನರು, ಪೋಷಕರು, ಕಂಬಳದ ತೀರ್ಪುಗಾರರು, ಓಟಗಾರರು, ಕೋಣಗಳ ಸೇವಾನಿರತರು, ಜನಪ್ರತಿನಿಧಿಗಳು, ಅಭಿಮಾನಿಗಳು ಭಾಗವಹಿಸಿ ಸಲಹೆ ನೀಡಬೇಕು ಎಂದು ಸಮಿತಿಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

About The Author

Leave a Reply