
ಬೆಂಗಳೂರು: ಬಿಬಿನ್ ಬಾಬು ಅವರ ಆಟದ ನೆರವಿನಿಂದ ರೆಬೆಲ್ಸ್ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2-1ರಿಂದ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಮಣಿಸಿತು.



ಬುಧವಾರ ನಡೆದ ಪಂದ್ಯದಲ್ಲಿ ಬಿಬಿನ್ (11, 23ನೇ) ಎರಡು ಗೋಲು ಗಳಿಸಿ ಮಿಂಚಿದರು.
ಚಿಕ್ಕಮಗಳೂರು ತಂಡದ ಇಲೆನ್ಸ್ ಶರ್ಮಾ (52ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ಮತ್ತೊಂದು ಪಂದ್ಯದಲ್ಲಿ ಎಂಇಜಿ ಅಂಡ್ ಸೆಂಟರ್ ಎಫ್‌ಸಿ ತಂಡವು 2-0ಯಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ತಂಡವನ್ನು ಮಣಿಸಿತು. ನಿಯಾಸ್ ನಾಜರ್ (80ನೇ), ಶೇಕ್ ಮುಜೀಬ್ (85ನೇ) ತಲಾ ಒಂದು ಗೋಲು ಗಳಿಸಿದರು.
ಇಂದಿನ ಪಂದ್ಯಗಳು
ಯಂಗ್ ಚಾಲೆಂಜರ್ಸ್ಸ್ ಎಫ್‌ಸಿ- ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿ (ಮಧ್ಯಾಹ್ನ 1.30)
ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು- ಎಫ್‌ಸಿ ಡೆಕ್ಕನ್ (ಮಧ್ಯಾಹ್ನ 3.30)