ವಕೀಲೆಯನ್ನು ಕೊಂದು 36 ಗಂಟೆಗಳ ಕಾಲ ಸ್ಟೋರ್ ರೂಮಿನಲ್ಲಿ ಅಡಗಿಕೊಂಡಿದ್ದ ಪತಿ ಅರೆಸ್ಟ್

ನವದೆಹಲಿ: ನೋಯ್ಡಾ ಬಂಗಲೆಯಲ್ಲಿ 61 ವರ್ಷದ ವಕೀಲರನ್ನು ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ಪತಿಯನ್ನು ಬಂಧಿಸಲಾಗಿದೆ. ಇದೀಗ ಬಂಧನಕ್ಕೊಳಗಾಗಿರುವ ನಿತಿನ್ ನಾಥ್ ಸಿನ್ಹಾ ಬಂಗಲೆಯ ಸ್ಟೋರ್ ರೂಂನಲ್ಲಿ 36 ಗಂಟೆಗಳಿಗೂ ಹೆಚ್ಚು ಕಾಲ ಅಡಗಿಕೊಂಡಿದ್ದರು ಎಂದು ವರದಿಯಾಗಿದೆ.

ಪೊಲೀಸರು ಆತನ ಫೋನ್ ಅನ್ನು ಟ್ರ್ಯಾಕ್ ಮಾಡಿ ಆತನನ್ನು ಹಿಡಿದಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲೆ ರೇಣು ಸಿನ್ಹಾ ಅವರ ಮೃತದೇಹ ನೋಯ್ಡಾ ಸೆಕ್ಟರ್ 30 ರಲ್ಲಿ ಅವರ ಬಂಗಲೆಯ ಸ್ನಾನಗೃಹದಲ್ಲಿ ಶನಿವಾರ ಪತ್ತೆಯಾಗಿದೆ. ಎರಡು ದಿನಗಳಿಂದ ಆಕೆಗೆ ಕರೆ ಮಾಡಿದರೂ ಉತ್ತರಿಸದ ಹಿನ್ನೆಲೆಯಲ್ಲಿ ಆಕೆಯ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಂಗಲೆ ತಲುಪಿದ ಪೊಲೀಸರಿಗೆ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯ ಪತಿ ಕಾಣೆಯಾಗಿದ್ದರು.

ಪೊಲೀಸರು ಸಿನ್ಹಾ ಅವರ ಫೋನ್ ಅನ್ನು ಟ್ರ್ಯಾಕ್ ಮಾಡಿದರು ಮತ್ತು ಕೊನೆಯ ಸ್ಥಳ ಅವರ ಬಂಗಲೆಯಾಗಿತ್ತು. ನಂತರ ಆತ ಸ್ಟೋರ್ ರೂಂನಲ್ಲಿ ಅಡಗಿಕೊಂಡಿದ್ದನ್ನು ಕಂಡು ಹಿಡಿದು ಬಂಧಿಸಿದ್ದಾರೆ.

ಈ ಹಿಂದೆ ವಕೀಲರ ಸಹೋದರ ಸಹೋದರಿಯನ್ನು ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಅಪರಾಧದ ಹಿಂದಿನ ಸಂಭವನೀಯ ಉದ್ದೇಶದ ಬಗ್ಗೆ ಪೊಲೀಸರು ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ.

Leave a Reply