October 12, 2025
WhatsApp Image 2023-09-14 at 9.29.42 AM

ವಿಟ್ಲ: ಇಲ್ಲಿನ ಕುದ್ದುಪದವು ಎಂಬಲ್ಲಿನ ನಿವಾಸುಗಳಾದ ಸಹೋದರರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೈರ ಮೂಲದ ಕುದ್ದುಪದವು ನಿವಾಸಿಗಳಾದ ಪವನ್ ಮತ್ತು ಪೃಥ್ವಿರಾಜ್ ವಿಷ ಸೇವಿಸಿ ಆತ್ಮಹತ್ಯೆಗೆತ್ನಿಸಿದ ಸಹೋದರರು. ವಿಷ ಸೇವನೆಯಿಂದ ತೀವ್ರ ಅಸ್ವಸ್ಥರಾದ ಇವರಿಬ್ಬರನ್ನು ವಿಟ್ಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಎರಡು ಪ್ರತ್ಯೇಕ ವಾಹನಗಳಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ . ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇವರ ತಂದೆ ಮೃತಪಟ್ಟಿದ್ದು, ತಾಯಿ ಮೈರ ಎಂಬಲ್ಲಿದ್ದಾರೆ. ಸಹೋದರರು ಅಜ್ಜಿ ಮನೆಯಲ್ಲಿ ವಾಸವಾಗಿದ್ದಾರೆ.

About The Author

Leave a Reply