Visitors have accessed this post 26 times.

ಎಸ್ಡಿಪಿಐ ಅಡ್ಯಾರ್ ಬ್ಲಾಕ್ ವತಿಯಿಂದ ಬ್ಲಾಕ್ ಸಮಾಗಮ – 2023

Visitors have accessed this post 26 times.

ಅಡ್ಯಾರ್ : 13-09-2023 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಡ್ಯಾರ್ ಬ್ಲಾಕ್ ಸಮಿತಿಯಿಂದ ಬ್ಲಾಕ್ ಸಮಾಗಮ – 2023 ಕಾರ್ಯಕ್ರಮವು ಬ್ಲಾಕ್ ಅಧ್ಯಕ್ಷರಾದ ಇರ್ಫಾನ್ ಅಡ್ಯಾರ್ ರವರ ಅಧ್ಯಕ್ಷತೆಯಲ್ಲಿ ವಲಚ್ಚಿಲ್ ಪದವಿನಲ್ಲಿ ನಡೆಯಿತು.

ಹೋರಾಟ ಮತ್ತು ಚುನಾವಣಾ ರಾಜಕೀಯದಲ್ಲಿ ಇನ್ನೂ ಹೆಚ್ಚಿನ ಹುರುಪಿನೊಂದಿಗೆ ಕೆಲಸ ಮಾಡಬೇಕೆಂದು ಪ್ರಸ್ತಾವಿಕದಲ್ಲಿ ಜಿಲ್ಲಾ ಸಮಿತಿ ಸದಸ್ಯ ಶಮೀಮ್ ಹಳೆಯಂಗಡಿ ಯವರು ಹೇಳಿದರು.

ಜಿಲ್ಲಾ ನಿಯೋಗದಲ್ಲಿ ಎಸ್ಡಿಪಿಐ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಯವರು ಮಾತಾಡಿ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಗುರುತಿಸಿ ಅದನ್ನು ಪರಿಹರಿಸುವಂತಹ ಕೆಲಸವನ್ನು ಮಾಡಬೇಕು ಹಾಗೂ ತಳಮಟ್ಟದಲ್ಲಿ ಪಕ್ಷ ಸಂಘಟಿಸುವಂತೆ ಕರೆ ನೀಡಿದರು.
ಈ ಸಂಧರ್ಭದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಉಸ್ಮಾನ್ ಗುರುಪುರ, ಉಪಾಧ್ಯಕ್ಷ ನಾಸಿರ್ ಉಳಾಯಿಬೆಟ್ಟು, ಕಾರ್ಯದರ್ಶಿ ಅಝರ್ ಉಳಾಯಿಬೆಟ್ಟು, ಅಡ್ಯಾರ್ ಪಂಚಾಯತ್ ಅಧ್ಯಕ್ಷ ಹಾಗೂ ಕ್ಷೇತ್ರ ಸಮಿತಿ ಸದಸ್ಯ ಯಾಸೀನ್ ಅರ್ಕುಳ ಹಾಗೂ ಬ್ಲಾಕ್ ಮತ್ತು ಗ್ರಾಮ ಮಟ್ಟದ ನಾಯಕರು ಉಪಸ್ಥಿತರಿದ್ದರು.

ಬ್ಲಾಕ್ ಅಧ್ಯಕ್ಷ ಇರ್ಫಾನ್ ಅಡ್ಯಾರ್ ಸ್ವಾಗತಿಸಿ,ಬ್ಲಾಕ್ ಕಾರ್ಯದರ್ಶಿ ಫೈಝಲ್ ಬದ್ರಿಯಾನಗರ ಧನ್ಯವಾದಗ್ಯೆದರು.

Leave a Reply

Your email address will not be published. Required fields are marked *