ಬಿಹಾರ: ಇಲ್ಲಿನ ಮುಜಾಫರ್ಪುರದಲ್ಲಿ ಶಾಲಾ ಮಕ್ಕಳಿಂದ ತುಂಬಿದ್ದ ದೋಣಿಯೊಂದು ಗೈಘಾಟ್ ಪೊಲೀಸ್ ಠಾಣೆ ಪ್ರದೇಶದ ಬೆನಿಯಾಬಾದ್ ಒಪಿಯ ಬಾಗ್ಮತಿ ನದಿಯಲ್ಲಿ ಮುಳುಗಿ ದೊಡ್ಡ ದೋಣಿ ಅಪಘಾತ ಸಂಭವಿಸಿದೆ.
ವರದಿಗಳ ಪ್ರಕಾರ ಬೋಟ್ ನಲ್ಲಿ ಒಟ್ಟು 32 ಮಕ್ಕಳಿದ್ದು, ಅವರಲ್ಲಿ 20 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಆದರೇ ಮತ್ತೊಂದು ವರದಿಯ ಪ್ರಕಾರ ಕನಿಷ್ಠ 24 ಮಕ್ಕಳು ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಪತ್ತೆ ಕಾರ್ಯ ಮುಂದುವರೆದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್ಡಿಆರ್‌ಎಫ್) ತಂಡವು ಘಟನಾ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.