Visitors have accessed this post 307 times.
ಕಾಸರಗೋಡು: ಉದುಮ ಸಮೀಪದ ಕಳ್ನಾಡ್ ನಲ್ಲಿ ತಾಯಿ ಮತ್ತು ಮಗಳ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ.
ಕಳ್ನಾಡ್ ಅರಮಂಗಾನದ ತಾಜುದ್ದೀನ್ ರವರ ಪತ್ನಿ ರುಬೀನಾ (33) ಮತ್ತು ಪುತ್ರಿ. ಹನಾನ್ ಮರಿಯಾ(5) ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.
ನಿನ್ನೆ ತಾಯಿ-ಮಗಳು ನಾಪತ್ತೆಯಾಗಿದ್ದು ಹುಡುಕಾಟ ನಡೆಸಿದಾಗ ಮನೆ ಸಮೀಪದ ಬಾವಿಯಲ್ಲಿ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಮೇಲ್ಪರಂಬ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದು, ಪೊಲೀಸರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದರು.
ರುಬೀನಾ ಪತಿ ತಾಜುದ್ದೀನ್ ಗಲ್ಫ್ ಉದ್ಯೋಗಿಯಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.