
ವಿಟ್ಲ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣಿಯೂರು ಕನ್ಯಾನ ಇಲ್ಲಿನ ಮಕ್ಕಳಿಗೆ ಸರಕಾರದ ವತಿಯಿಂದ ನೀಡಲಾದ ಉಚಿತ ಶೂ ವಿತರಣಾ ಕಾರ್ಯಕ್ರಮ ಹಾಗೂ ಮಾದಕವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ ಮತ್ತು ನಿವಾರಣಾ ಕಾರ್ಯಕ್ರಮ ಇಂದು ನಡೆಯಿತು.




ಈ ಕಾರ್ಯಕ್ರಮದಲ್ಲಿ ಕನ್ಯಾನ ಪಂಚಾಯತ್ ಸದಸ್ಯರಾದ ಶ್ರೀ ಅಬ್ದುಲ್ ಮಜೀದ್ ಕನ್ಯಾನ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ದುರ್ಗಾ ಲಕ್ಷ್ಮೀ,ಉಪಾಧ್ಯಕ್ಷೆ ಶ್ರೀಮತಿ ನೆಸಿಮಾ ಕಣಿಯೂರು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅನಿತಾ ಮಿನೇಜಸ್,ಸಹ ಶಿಕ್ಷಕರಾದ ಶ್ರೀಮತಿ ರೇಣುಕಾ ಕಣಿಯೂರು, ವನಿತಾ ಕೆ ಎಲ್ ಉಪಸ್ಥಿತರಿದ್ದರು…
ಶಾಲಾ ಮಕ್ಕಳಿಂದ ಮದ್ಯವ್ಯಸನಿಗಳ ಬಗ್ಗೆ ಕಿರು ನಾಟಕ ಪ್ರದರ್ಶನ ನಡೆಯಿತು.