
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಕಚೇರಿ, ಪೊಲೀಸ್ ಠಾಣೆ, ಶಾಲಾ-ಕಾಲೇಜು, ವಿವಿಗಳನ್ನು ಆರ್ ಎಸ್ ಎಸ್ ಶಾಖೆಗಳನ್ನಾಗಿ ಮಾಡಲಾಗಿತ್ತು. ಹೀಗೆ ತೆರೆದಿದ್ದ ಆರ್ ಎಸ್ ಎಸ್ ಎಲ್ಲಾ ಶಾಖೆಗಳನ್ನು ಒಂದೊಂದಾಗಿ ಬಂದ್ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.



ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಆರ್ ಎಸ್ ಎಸ್ ಶಾಖೆಗಳನ್ನು ತೆರೆದು ನಿಯಮ ಬಾಹಿರ ಕೆಲಸ ಮಾಡಲು ಬಳಸಿಕೊಳ್ಳಲಾಗುತ್ತಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಅಂತಹ ಕೇಂದ್ರಗಳನ್ನು ಒಂದೊಂದಾಗಿ ಬಂದ್ ಮಾಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಸರ್ಕಾರಿ ಕಚೇರಿ, ಪೊಲೀಸ್ ಠಾಣೆ, ಶಾಲಾ-ಕಾಲೇಜು, ವಿವಿಗಳಿಗೆ ಅವುಗಳದ್ದೇ ನಿಯಮಗಳಿವೆ. ಯಾವ ಕಚೇರಿಯೂ ಆದಾಗಿಯೇ ಇದ್ದರೇ ಚೆನ್ನ. ಹಾಗಾಗಿ ಕಠಿಣ ಹೆಜ್ಜೆ ಇಟ್ಟಿದ್ದೇವೆ. ಆರ್ ಎಸ್ ಎಸ್ ಶಾಖೆಗಳಾಗಿದ್ದ ಸರ್ಕಾರಿ ಕಚೇರಿಗಳು ಸಂಪೂರ್ಣ ಮುಕ್ತಗೊಂಡಿವೆ ಎಂದರು.
ಈಗ ಸರ್ಕಾರಿ ಕಚೇರಿಗಳು ಸಂಪೂರ್ಣ ಜನಪರ ಕೆಲಸ, ಸಂವಿಧಾನ ಪರ ಕಾರ್ಯ ಮಾಡುತ್ತಿವೆ. ಆರ್ ಎಸ್ ಎಸ್ ತತ್ವಿ ನಂಬಿ ಯಾರೂ ಉದ್ದಾರ ಆಗಿಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದರು.