August 30, 2025
Talaq

ಸುಳ್ಯ : ವಿದೇಶದಲ್ಲಿರುವ ಪತಿ ಡೆಲಿವರಿಗೆಂದು ಭಾರತಕ್ಕೆ ಬಂದಿರುವ ತನ್ನ ಹೆಂಡತಿಗೆ ತಲಾಖ್ ನೀಡಿ ಅಘಾತ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

ತಲಾಖ್ ಗಂಡನ ವಿರುದ್ಧ ಪತ್ನಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಿಸ್ರೀಯಾ ಎರಡನೇ ಮಗುವಿನ ಹೆರಿಗೆಗೆ ಭಾರತಕ್ಕೆ ಬಂದಿದ್ದು, 6 ತಿಂಗಳಿಂದ ಇಲ್ಲೇ ನೆಲೆಸಿದ್ದಾರೆ.

ಅಬ್ದುಲ್ ರಷೀದ್ ಮೂಲತಃ ಕೇರಳದ ತ್ರಿಶೂರ್​ ನಿವಾಸಿಯಾದಗಿದ್ದು ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಈ ಮಧ್ಯೆ ಆಕೆಯ ವಿರುದ್ಧ ವೈಮನಸ್ಯ ಬೆಳೆಸಿಕೊಂಡ ಗಂಡ ಅಬ್ದುಲ್ ರಷೀದ್ ದಿಢೀರನೆ ವಾಟ್ಸಾಪ್ ಮೂಲಕ ತಲಾಕ್ ಸಂದೇಶ ರವಾನಿಸಿದ್ದಾನೆ.

ತ್ರಿವಳಿ ತಲಾಖ್​ಗೆ ದೇಶಾದ್ಯಂತ ನಿಷೇಧವಿದ್ದು, ಅದನ್ನು ಅನುಸರಿಸಿದರೆ ಕಠಿಣ ಶಿಕ್ಷೆಯ ಕಾಯ್ದೆ ಈಗಾಗಲೇ ಜಾರಿ ಮಾಡಲಾಗಿದೆ.

ಹಾಗಿದ್ದರೂ, ಅಬ್ದುಲ್ ರಷೀದ್ ಎಂಬಾತ ಇಸ್ಲಾಂ ನಿಯಮವನ್ನು ಪತ್ನಿಯ ಮೇಲೆ ಹೇರಲು ಯತ್ನಿಸಿದ್ದಾನೆ.

ಮೊದಲ ಮಗುವಾದ ಬಳಿಕ ಮಿಸ್ರೀಯಾ ವಿದೇಶದಲ್ಲಿ ಪತಿ ಜೊತೆ ನೆಲೆಸಿದ್ದರು.

ಎರಡನೇ ಮಗುವಿನ ಹೆರಿಗೆಗೆ ಬಂದಾಗ ಮನಸ್ತಾಪ ತಲೆದೋರಿದೆ ಎಂದು ತಿಳಿದುಬಂದಿದ್ದು ಸುಳ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

About The Author

Leave a Reply