Visitors have accessed this post 755 times.

ವಾಟ್ಸಾಪ್ ಚಾನೆಲ್ ಆರಂಭಿಸಿದ ದೇಶದ ಮೊದಲ ಸಿಎಂ ಸಿದ್ಧರಾಮಯ್ಯ

Visitors have accessed this post 755 times.

ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಹೊಸ ಫೀಚರ್ ವಾಟ್ಸಾಪ್ ಚಾನೆಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದಾರೆ.

ಸಾರ್ವಜನಿಕರು ಈ ವಾಟ್ಸಾಪ್ ಖಾತೆ ಫಾಲೋ ಮಾಡಬಹುದಾಗಿದೆ. ಸರ್ಕಾರವೊಂದರ ಮುಖ್ಯಸ್ಥರಲ್ಲಿ ಮೊಟ್ಟ ಮೊದಲ ವಾಟ್ಸಾಪ್ ಚಾನೆಲ್ ಅನ್ನು ಸಿದ್ದರಾಮಯ್ಯ ಅವರು ಆರಂಭಿಸಿದ್ದಾರೆ.ದೇಶದಲ್ಲಿ ಈ ರೀತಿ ಚಾನೆಲ್ ಆರಂಭಿಸಿದ ಮೊದಲ ಸಿಎಂ ಸಿದ್ದರಾಮಯ್ಯ ಅವರಾಗಿದ್ದಾರೆ.

ಜನ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವ ಸಿದ್ದರಾಮಯ್ಯ ಅವರು ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸಾಪ್ ಚಾನೆಲ್ ಆರಂಭಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಕಳೆದ ವಾರವಷ್ಟೇ ವಾಟ್ಸಾಪ್ ಚಾನೆಲ್ ಹೊಸ ಆವಿಷ್ಕಾರ ಪರಿಚಯಿಸಲಾಗಿದೆ.

ಸೆಪ್ಟೆಂಬರ್ 12ರಂದು ಸಿಎಂ ಚಾನೆಲ್ ಆರಂಭಿಸಿದ್ದು, 50 ಸಾವಿರಕ್ಕೂ ಅಧಿಕ ಫಾಲೋಯರ್ಸ್ ಹೊಂದಿದ್ದಾರೆ. ಜನರಿಗೆ ಬೆರಳ ತುದಿಯಲ್ಲಿಯೇ ಸರ್ಕಾರದ ದೈನಂದಿನ ಮಾಹಿತಿ ಒದಗಿಸಿ ಆಡಳಿತ ಪಾರದರ್ಶಕವಾಗಿಸಲು ಈ ವಾಟ್ಸಾಪ್ ಚಾನೆಲ್ ಕಾರ್ಯಾರಂಭ ಮಾಡಲಾಗಿದೆ. Chief Minister of Karnataka ಎಂದು ಸರ್ಚ್ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ವಾಟ್ಸಾಪ್ ಚಾನಲ್ ಫಾಲೋ ಮಾಡಬಹುದಾಗಿದೆ.

Leave a Reply

Your email address will not be published. Required fields are marked *