ಫಿಲೋಮಿನಾ ಕಾಲೇಜು 41 ನೇ ಗಣೇಶೋತ್ಸವ ಸಂಭ್ರಮ

ಪುತ್ತೂರು: ಕೇಸರಿ ಶಾಲು ಧರ್ಮದ ಸಂಕೇತವಾಗಿದೆ ವಿನಾ ಯಾವುದೇ ರಾಜಕೀಓಯ ಪಕ್ಷದ ಸೊತ್ತಲ್ಲ, ಕೆಲವರು ಅದು ನಮ್ಮದೇ ಎಂದು ಹೇಳುತ್ತಿದ್ದಾರೆ, ಧರ್ಮದ ಹಾದಿಯಲ್ಲಿ ನಡೆಯುವ ಪ್ರತೀಯೊಬ್ಬ ವ್ಯಕ್ತಿಯೂ ತನ್ನ ಧರ್ಮವನ್ನು ಆಚರಣೆ ಮಾಡುವುದರ ಜೊತೆ ಸಹೋದರ ಧರ್ಮವನ್ನು ಗೌರವಿಸುತ್ತಾನೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪುತ್ತೂರಿನ ಸಂತಫಿಲೋಮಿನಾ ಕಾಲೇಜು ಬಳಿ ಸಂತಫಿಲೋಮಿನಾ ವಿದ್ಯಾ ಸಂಸ್ಥೆಯಗಳ ಹಿರಿಯ ವಿದ್ಯಾರ್ಥಿಗಳ ಗಣೇಶೋತ್ಸವ ಸೇವಾ ಟ್ರಸ್ಟ್ , ಫಿಲೋಮಿನ ಕಾಲೇಜು ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲ್ಲಿ ಪ್ರತೀಯೊಬ್ಬರೂ ಪರಸ್ಪರ ಸಹೋದರರಂತೆ ಬಾಳಬೇಕು, ಇಲ್ಲಿ ಯಾರೂ ಮೇಲೂ ಇಲ್ಲ ಕೀಳೂ ಇಲ್ಲ, ನಮ್ಮ ದೇಹದಲ್ಲಿ ಹರಿಯುವ ರಕ್ತ ಒಂದೇ, ಉಸಿರಾಡುವ ಗಾಳಿಯೂ ಒಂದೇ, ಕುಡಿಯುವ ನೀರೂ ಒಂದೇ ಹೀಗಿರುವಾಗ ನಮ್ಮಲ್ಲಿ ಧರ್ಮದ ಹೆಸರಲ್ಲಿ ಬೇದ ಭಾವ ಯರೂ ಮಾಡಬಾರದು. ಪರಸ್ಪರ ಶಾಂತಿ ಸೌಹಾರ್ಧತೆಯಿಂದ ಬಾಳಿ ಬದುಕಿದರೆ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಹಿಂಸೆಗೆ ನಾವು ಎಂದೂ ಪ್ರಚೋಧನೆ ಕೊಡಬಾರದು, ಹಿಂಸೆಯಿಂಸ ಸಾಧಿಸಿದ್ದು ಏನೂ ಇಲ್ಲ. ಒಂದೇ ತಾಯಿ ಮಕ್ಕಳಂತೆ ಬಾಳಿ ಬದಕುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಕಾರಣ ಕರ್ತರಾಗಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಬಹುತೇಕ ದೇವಸ್ಥಾನ, ದೈವಸ್ಥಾಮ ಮಸೀದಿ, ಚರ್ಚುಗಳು ಸರಕಾರಿ ಜಾಗದಲ್ಲಿದೆ. ಸರಕಾರ ಜಾದಲ್ಲಿರುವ ಆರಾಧನಾ ಸ್ಥಳಗಳನ್ನು ಸಕ್ರಮ ಮಾಡಲು ಅಥವಾ ಮಂದಿರದ ಹೆಸರಿನಲ್ಲಿ ಮಾಡಲು ಇದುವರೆಗೂ ಯಾರೂ ಮುಂದಾಗಿಲ್ಲ. ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ್ದೇನೆ ಮುಂದಿನ ದಿನಗಳಲ್ಲಿ ಅದು ಕಾನೂನಾಗಿ ಕಾರ್ಯರೂಪಕ್ಕೆ ಬರುವ ವಿಶ್ವಾಸ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಫಿಲೋಮಿನಾ ಪದವಿ ಕಾಲೇಜು ಪ್ರಾಂಶುಪಾಲರಾದ ಆಂಟನಿ ಪ್ರಕಾಶ್ ಮೊಂತೆರೋ, ಪಿಯು ಕಾಲೇಜು ಪ್ರಾಂಶುಪಾಲರಾದ ಅಶೋಕ್ ರಾಯನ್ ಕ್ರಾಸ್ತಾ, ಕಾಲೇಜು ವಾರ್ಡನ್ ರುಪೇಶ್ ತಾವ್ರೋ, ಕಾರ್ಯದರ್ಶಿ ಹೃದಯ್ ಎಸ್, ಜೊತೆ ಕಾರ್ಯದರ್ಶಿ ರಕ್ಷಾ ಅಂಚನ್, ಟ್ರಸ್ಟ್ ಗೌರವಾಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ ಉಪಸ್ಥಿತರಿದ್ದರು.ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಕ್ರಂ ಆಳ್ವ ಸ್ವಾಗತಿಸಿದರು.
ವರ್ಷಾ ಕಾರ್ಯಕ್ರಮ ನಿರೂಪಿಸಿದರು.

Leave a Reply