August 30, 2025
WhatsApp Image 2023-09-22 at 9.05.32 AM
ಬಂಟ್ವಾಳ: ಗಣೇಶೋತ್ಸವ ಮೆರವಣಿಗೆ ವೇಳೆ ಕಿಡಿಗೇಡಿಗಳು ಬ್ಯಾನರ್ ಹರಿದು ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆಯಲ್ಲಿ ನಡೆದಿದೆ.ಸಜೀಪಮೂಡದ ಕಂದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ಗುರುವಾರ ಸಂಜೆ ಸುಮಾರು 7 ಗಂಟೆಗೆ ಪ್ರಾರಂಭವಾಗಿತ್ತು. ರಾತ್ರಿ 9.30ಕ್ಕೆ ಸುಭಾಷ್ ನಗರ ಕೊಳಕೆಗೆ ತಲುಪಿತ್ತು ಈ ವೇಳೆ ಜನಸಂದಣಿ ಇರೋದನ್ನೇ ಗಮನಿಸಿದ ಕೆಲ ಕಿಡಿಗೇಡಿಗಳು ಕೊಳಕೆ ಜಂಕ್ಷನ್ ಪಕ್ಕದಲ್ಲಿ ಮುಸ್ಲೀಮರು ಹಾಕಿದ್ದ ಶುಭಾಶಯದ ಬ್ಯಾನರ್ ನ್ನು ಹರಿದು ಹಾಕಿದ್ದಾರೆ. ಬಳಿಕ ಬ್ಯಾನರ್ ನ್ನು ಅಲ್ಲಿಯೇ ಸರಿಪಡಿಸುವ ಕೆಲಸ ಮಾಡಿದ್ದು ಕೆಲ ಇಂತಹ ಕಿಡಿಗೇಡಿಗಳಿಂದ ಎಲ್ಲರಿಗೂ ಕೆಟ್ಟ ಹೆಸರು ಎಂದು ಸ್ಥಳೀಯರು ಹಾಗೂ ಗಣೀಶೋತ್ಸವ ಕಾರ್ಯಕ್ರಮ ಆಯೋಜಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author

Leave a Reply