Visitors have accessed this post 574 times.
ಸುಳ್ಯ,: ಕೇರಳ ಓಣಂ ಬಂಪರ್ ಲಾಟರಿ 25 ಕೋಟಿ ರೂ. ಭಾರಿ ಮೊತ್ತವನ್ನು ಸುಳ್ಯ ತಾಲೂಕಿನ ಯುವಕನೊಬ್ಬ ಗೆದ್ದಿದ್ದಾನೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಳ್ಳು ಸುದ್ದಿ ಹರಡಿದವರ ವಿರುದ್ಧ ಯುವಕನ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ನಿವಾಸಿ ಗೌತಮ್ ಕುಲ್ಸಿ ಮನೆ (27) ಸ್ವಂತ ಪಿಕಪ್ ಇರಿಸಿಕೊಂಡು ಅದರಲ್ಲಿ ಚಾಲಕರಾಗಿ ದುಡಿಯುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ಅವರಿಗೆ ಕೇರಳ ಓಣಂ ಬಂಪರ್ ಲಾಟರಿ 25 ಕೋಟಿ ರೂ. ಜಯಿಸಿದ್ದಾರೆಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದ ಯುವಕ ಹಾಗೂ ಅವರ ಮನೆಯವರಿಗೆ ತೀವ್ರ ಮಾನಸಿಕ ಕಿರಿಕಿರಿಯಾಗಿದೆ. ಪ್ರತಿಯೊಬ್ಬರು ಕರೆ ಮಾಡಿ ವಿಚಾರಿಸುವುದಕ್ಕೆ ಉತ್ತರ ಕೊಡುವುದಕ್ಕೂ ಕಷ್ಟವಾಗಿದೆ.ಇದರಿಂದ ನೊಂದ ಗೌತಮ್ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ವಿರುದ್ಧ ಅಪಪ್ರಚಾರ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.