Visitors have accessed this post 1626 times.
ಮಂಗಳೂರು: ಮುಂದೆ ಬರಲಿರುವ ಮುಸ್ಲಿಮರ ಹಬ್ಬ ಈದ್ ಮಿಲಾದ್ ಹಿಂದೂ ಮೀನು ವ್ಯಾಪಾರಸ್ಥರು ಮೀನುಗಾರಿಕಾ ಬಂದರಿನಲ್ಲಿ ವ್ಯಾಪಾರ ನಡೆಸಿದರೆ ಅವರ ಮೇಲೆ ಒಂದು ತಿಂಗಳ ಕಾಲ ವ್ಯಾಪಾರ ನಿರ್ಬಂಧ ಹಾಗೆ ದಂಡ ವಿಧಿಸುವಂತಹ ಬ್ಯಾನರ್ ನ್ನು ಧಕ್ಕೆಯ ಹಸಿ ಮೀನು ವ್ಯಾಪಾರಸ್ಥರು ಹಾಕಿದ್ದು ಖಂಡನೀಯ ಪ್ರಜಾಪ್ರಭುತ್ವ ದೇಶದಲ್ಲಿ ಇದು ಸಂವಿಂಧಾನ ವಿರೋಧಿಯಾಗಿದೆ.
ಹಿಂದೂ ಮೀನು ವ್ಯಾಪಾರಸ್ಥರ ಮೇಲೆ ನಡೆಯುವ ಈ ದೌರ್ಜನ್ಯಕ್ಕೆ ವಿಶ್ವ ಹಿಂದೂ ಪರಿಷದ್ ಖಂಡನೆ ಮಾಡುತ್ತದೆ. ಅಲ್ಲದೆ ಜಿಲ್ಲಾಡಳಿತ ತಕ್ಷಣ ಹಸಿ ಮೀನು ವ್ಯಾಪಾರಸ್ಥ ಸಂಘದ ಅಧ್ಯಕ್ಷರ ಮೇಲೆ ಹಾಗು ಈ ಬ್ಯಾನರ್ ಅಳವಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಆಗ್ರಹಿಸಿದರು.