Visitors have accessed this post 427 times.
ಬೆಂಗಳೂರು: ಮುಖ್ಯಮಂತ್ರಿಯಾಗಿ ನನ್ನ ಅವಧಿ ಮುಗಿಯುವ ಮುನ್ನ ಮುಸ್ಲಿಮರ ಅಭಿವೃದ್ಧಿ ಅನುದಾನವನನ್ನು 10 ಸಾವಿರ ಕೋಟಿಗೆ ಹೆಚ್ಚಿಸಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬ್ಯಾರಿ ವೆಲ್‌ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ ನಿರ್ಮಿಸಲಾದ ಬ್ಯಾರಿ ಸೌಹಾರ್ದ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಮುಸ್ಲಿಮ್ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಹಲವು ಬೇಡಿಕೆಗಳು ಕೇಳಿ ಬಂದಿವೆ. ಇದಕ್ಕೂ ಮುನ್ನ ಮುಸ್ಲಿಮರಿಗಾಗಿ 400 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ನಾನು ಆ ಮೊತ್ತವನ್ನು 3 ಸಾವಿರ ಕೋಟಿಗೆ ಏರಿಸಿದ್ದೆ. ಅನುದಾನ ಹೆಚ್ಚಿಸುವಂತೆ ನನಗೆ ಯಾರೂ ಕೇಳಿರಲಿಲ್ಲ. ಆದರೂ ಏರಿಸಿದ್ದೆ. ಈಗಲೂ ಅಷ್ಟೇ ಮುಸ್ಲಿಮರ ಅನುದಾನವನ್ನು ನನ್ನ ಅವಧಿ ಮುಗಿಯುವುದರ ಒಳಗಾಗಿ 10ಸಾವಿರ ಕೋಟಿಗೆ ಹೆಚ್ಚಿಸಲಿದ್ದೇನೆ. ರಾಜ್ಯದ ಸಂಪತ್ತು ಎಲ್ಲರಿಗೂ ಸಿಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.