Visitors have accessed this post 1182 times.
ಮಂಗಳೂರು: ನಗರದ ಕಂಬಳದ ಚಂದ್ರಿಕಾ ಬಡಾವಣೆ ನಿವಾಸಿ ವೃದ್ಧ ಸಹೋದರಿಯರಿಬ್ಬರು ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕದ್ರಿ ಕಂಬಳ ಚಂದ್ರಿಕಾ ಬಡಾವಣೆ ನಿವಾಸಿಗಳಾದ ಲತಾ ಭಂಡಾರಿ (70) ಹಾಗೂ ಸುಂದರಿ ಶೆಟ್ಟಿ( 80) ಆತ್ಮಹತ್ಯೆಗೆ ಶರಣಾದವರು. ಲತಾ ಭಂಡಾರಿಯವರ ಪತಿ ಜಗನ್ನಾಥ ಭಂಡಾರಿಯವರು ಕೆಲಸಕ್ಕೆಂದು ಹೋಗಿದ್ದ ವೇಳೆ ಈ ಸಹೋದರಿಯರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ 4:30ರ ವೇಳೆಗೆ ಜಗನ್ನಾಥ ಭಂಡಾರಿಯವರು ಮನೆಗೆ ಬಂದಾಗ ಮನೆಯ ಬಾಗಿಲು ಮುಚ್ಚಿತ್ತು. ಎಷ್ಟು ಬಾಗಿಲು ಬಡಿದರೂ ಬಾಗಿಲು ತೆರೆಯದಿರುವುದರಿಂದ ಕಿಟಕಿಯಿಂದ ನೋಡಿದಾಗ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.