
ಸವಣೂರು: ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸಭೆಯು ಸವಣೂರು ಅಂಬೇಡ್ಕರ್ ಭವನದಲ್ಲಿ ಸುಳ್ಯ ವಿಧಾನಸಭಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕೆನರಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು.



ಸಭೆಯಲ್ಲಿ 2B ಮೀಸಲಾತಿಯನ್ನು 8% ಏರಿಸಬೇಕು ಹಾಗೂ ಕಾಂತರಾಜು ವರದಿಯನ್ನು ಜಾರಿಗೊಳಿಸಬೇಕೆಂಬ ಉದ್ದೇಶ ಇಟ್ಟುಕೊಂಡು ಪಕ್ಷದ ರಾಜ್ಯ ಸಮಿತಿಯು 9 ರಿಂದ 13 ತಾರೀಖಿನವರೆಗೆ ನಡೆಸುವ ಜನಾಂದೋಲನವನ್ನು ಯಶಸ್ವಿ ಗೊಳಿಸುವ ಬಗ್ಗೆ ಹಾಗೂ ಇದರ ಸಮಾರೋಪ ಸಮಾರಂಭದ ಭಾಗವಾಗಿ ಮಂಗಳೂರಿನಲ್ಲಿ ಧರಣಿ ನಡೆಯಲಿದ್ದು ಇದರಲ್ಲಿ ಪಾಲ್ಗೊಳ್ಳುವ ಬಗ್ಗೆ ಹಾಗೂ ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣಾ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಸಿದ್ದೀಕ್ ಸವಣೂರು, ಉಪಾಧ್ಯಕ್ಷ ಬಾಬು ಎನ್ ಸವಣೂರು, ಪ್ರಧಾನ ಕಾರ್ಯದರ್ಶಿ ರಫೀಕ್ ಎಂ.ಎ ಸೇರಿದಂತೆ ವಿವಿಧ ಬ್ಲಾಕ್ ಪದಾಧಿಕಾರಿಗಳು ಉಪಸ್ಥಿತರಿದ್ದರು.