ತನ್ನ ಸ್ವಂತ ಇಬ್ಬರು ತಂಗಿಯರ ಶಿರಚ್ಚೇದ ಮಾಡಿದ ಅಕ್ಕ

ಉತ್ತರಪ್ರದೇಶ : ಅಕ್ಕನೆ ತನ್ನ ಸ್ವಂತ ಇಬ್ಬರು ತಂಗಿಯರ ತಲೆ ಕಡಿದು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಬಲರಾಯ ಪೊಲೀಸ್ ಠಾಣೆ ವ್ಯಾಪ್ತಿಯ ಬಹದ್ದೂರ್‌ಪುರ ಗ್ರಾಮದಲ್ಲಿ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತರನ್ನು ಆರು ವರ್ಷದ ಸುರ್ಭಿ ಮತ್ತು ನಾಲ್ಕು ವರ್ಷದ ರೋಶ್ನಿ ಎಂದು ಗುರುತಿಸಲಾಗಿದೆ. ಅವರ ಛಿದ್ರಗೊಂಡ ದೇಹಗಳು ಅವರ ಮನೆಯ ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೈವೀರ್ ಸಿಂಗ್ ಎಂಬಾತನ ಪುತ್ರಿಯರಾದ ಅಪ್ರಾಪ್ತರನ್ನು ಅವರ ಹಿರಿಯ ಸಹೋದರಿ ಅಂಜಲಿ ಪಾಲ್ ಹತ್ಯೆ ಮಾಡಿದ್ದಾರೆ ಎಂದು ಕಾನ್ಪುರ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿ) ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯಗಳನ್ನು ಮರೆಮಾಚುವುದು ಅಥವಾ ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯೊಂದಿಗೆ ಮೂವರು ಪುರುಷರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

Leave a Reply