November 8, 2025
WhatsApp Image 2023-10-11 at 8.18.18 AM

ಉಳ್ಳಾಲ: ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ತೌಡುಗೋಳಿ ಕ್ರಾಸ್ ಗುರಿಕಾರಮೂಲೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರಿ ಸುಜಾತ ಶೆಟ್ಟಿ (38) ಎಂಬವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯ ಭಾರತೀಯ ವಿದ್ಯಾಪೀಠ ಎಂಬಲ್ಲಿ ನಡೆದಿದೆ.

ಪಜೀರು ಪಾನೇಲ ನಿವಾಸಿ ಪುಣೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಸುರೇಶ್ ಕೈಯ್ಯ ಎಂಬವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ಸುಜಾತಾ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. ಅ.8 ರಂದು ಸುಜಾತ ಮೃತದೇಹ ಭಾರತೀಯ ವಿದ್ಯಾಪೀಠದಲ್ಲಿರುವ ಮನೆಯೊಳಗೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು.

ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಶವ ಮಹಜರಿಗೆ ಕಳುಹಿಸಲಾಗಿತ್ತು. ಅ.9 ರಂದು ತೌಡುಗೋಳಿ ಸಮೀಪ ಸುಜಾತ ಅವರ ಅಂತಿಮ ಸಂಸ್ಕಾರ ನೆರವೇರಿದ್ದು, ಮನೆಮಂದಿ ಸುರೇಶ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಸುಜಾತಾ ಅವರು ತೊಕ್ಕೊಟ್ಟು ಬ್ಯೂಟಿಪಾರ್ಲರ್ ನಲ್ಲಿ ಈ ಹಿಂದೆ ಬ್ಯೂಟೀಷಿಯನ್ ಆಗಿ ಕೆಲಸ‌ನಿರ್ವಹಿಸುತ್ತಿದ್ದರು.

ಶವಮಹಜರು ವರದಿ ಬಂದ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ.

About The Author

Leave a Reply