Visitors have accessed this post 224 times.
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಯಲ್ಲಿ ನಾಥುರಾಮ್ ಗೂಡ್ಸೆಯ ಫೋಟೋ ಪ್ರದರ್ಶನ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.
ಇದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಅದಂತೆ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ನಿವಾಸಿ ಹನುಮಂತಪ್ಪ ಎಂಬುವರು ದೂರು ನೀಡಿದ್ದು, ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 505/1(C), 505/1(B) ಅಡಿಯಲ್ಲಿ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಾಂತಿ ಭಂಗ, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಫೋಟೋ ಪ್ರದರ್ಶನ ಮಾಡಲಾಗಿದ್ದು, ಗೋಡ್ಸೆ ಚಿತ್ರ ಪ್ರದರ್ಶಿಸಿದವರ ಪತ್ತೆ ಮಾಡಿ ಕಾನೂನು ಕ್ರಮಕ್ಕೆ ಒತ್ತಾಯಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ಆಯೋಜಿಸಿದ ಶೋಭಾಯಾತ್ರೆ ಇದಾಗಿದ್ದು ಯಾತ್ರೆಯಲ್ಲಿ ವೀರ್ ಸಾವರ್ಕರ್, ಶರತ್ ಮಡಿವಾಳ ರ ಪೋಟೋ ಕೂಡ ಪ್ರದರ್ಶನವಾಗಿದೆ.
ಮಹಾತ್ಮ ಗಾಂಧೀಜಿಯವರನ್ನು ಕೊಂದ ನಾಥುರಾಮ್ ಗೂಡ್ಸೆಯನ್ನು ವೈಭವೀಕರಸಿದ್ದು ಎಷ್ಟು ಮಟ್ಟಿಗೆ ಸರಿ ಎಂದು ಒಂದು ವರ್ಗ ಪ್ರಶ್ನೆ ಮಾಡಿದೆ.