November 8, 2025
WhatsApp Image 2023-10-13 at 9.58.38 AM

ಬೆಳ್ತಂಗಡಿ: ತಾಲ್ಲೂಕಿನ ಕಳಿಯದಲ್ಲಿ ಅಂಗನವಾಡಿಗೆ ಮೀಸಲಿರಿಸಲಾಗಿದ್ದ ಜಾಗವನ್ನು ಖಾಸಗಿ ವ್ಯಕ್ತಿ ಅತಿಕ್ರಮಣ ಮಾಡಿರುವ ಬಗ್ಗೆ ಸ್ಥಳೀಯರು ತಹಶೀಲ್ದಾರರಿಗೆ ಹಾಗೂ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದಾರೆ. ಕಳಿಯ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿಯ ಹೆಸರಿನಲ್ಲಿರುವ 0.30 ಸೆಂಟ್ಸ್ ಜಾಗದ ಒಂದು ‘ಪಾರ್ಶ್ವದಲ್ಲಿ ಗಡಿ ಗುರುತು ಹಾಕಿದ್ದ ಜಾಗವನ್ನು ಜೆಸಿಬಿ ಯಂತ್ರದ ಮೂಲಕ ಸ್ಥಳೀಯರೊಬ್ಬರು ಅತಿಕ್ರಮಿಸಿ ಸಮತಟ್ಟು ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಮತ್ತು ಅಂಗನವಾಡಿ ಬಾಲ ವಿಕಾಸ ಸಮಿತಿ ವತಿಯಿಂದ ಆಕ್ಷೇಪ ವ್ಯಕ್ತಪಡಿಸಿ ಅಂಗನವಾಡಿಯ ಈ ಜಾಗವನ್ನು ಅತಿಕ್ರಮಣಗೊಳಿಸಿದ ಬಗ್ಗೆ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರರಿಗೆ ಮತ್ತು ಪೋಲಿಸ್ ಠಾಣೆಗೆ ದೂರು ದೂರು ನೀಡಿದ್ದಾರೆ. ತಹಶೀಲ್ದಾರರು ದೂರನ್ನು ಪರಿಶೀಲಿಸಿ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದಾರೆ. ಈ ಹಿಂದೆ ಕೂಡಾ ಅತಿಕ್ರಮಣ ಮಾಡಿದ್ದ ಕಾರಣ ಗ್ರಾಮ ಪಂಚಾಯತ್ ಮತ್ತು ಕಂದಾಯ ಇಲಾಖೆ ಮೌಖಿಕವಾಗಿ ತಿಳಿಸಿ ಅತಿಕ್ರಮಣವನ್ನು ನಿಲ್ಲಿಸಿತ್ತು. ಆದರೆ ಪುನಃ ಕಚೇರಿ ರಜಾ ದಿನದಲ್ಲಿ ಜೆಸಿಬಿ ಯಂತ್ರದ ಮೂಲಕ ಅತಿಕ್ರಮಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಅತಿಕ್ರಮಣಕಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು ಸೂಕ್ತ ಕ್ರಮ ವಹಿಸಬೇಕೆಂದು ತಹಶೀಲ್ದಾರರನ್ನು ಆಗ್ರಹಿಸಿದ್ದಾರೆ.

About The Author

Leave a Reply