Visitors have accessed this post 654 times.
ಯುವಕನೋರ್ವ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸಿ ಊರೆಲ್ಲಾ ಸುತ್ತಾಡಿಸಿ ನಂತರ ಕೈ ಕೊಟ್ಟಿದ್ದು, ನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬೆಳ್ಳೊಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಆಶಾ (20) ಎಂದು ಗುರುತಿಸಲಾಗಿದೆ.
ಕಾಲೇಜೊಂದರಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಆಶಾಗೆ ಅದೇ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಮಂಜುನಾಥ್ ಜೊತೆ ಲವ್ ಆಗಿದೆ. ನಂತರ ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ. ನಂತರ ಇಬ್ಬರು ಊರೆಲ್ಲಾ ಸುತ್ತಾಡಿದ್ದಾರೆ. ಆದರೆ ಮಂಜುನಾಥ್ ಬೇರೊಂದು ಹುಡುಗಿಯ ಸಹವಾಸ ಮಾಡಿದ್ದಾನೆ. ಇದರಿಂದ ಸಿಟ್ಟಾದ ಆಶಾ, ಮಂಜುನಾಥನ ಬಳಿ ಜಗಳ ತೆಗೆದಿದ್ದಾಳೆ. ಈ ವೇಳೆ ಮಂಜುನಾಥ್ ನನ್ನ ಜೊತೆ ನೀನು ಸುತ್ತಾಡಿರುವ ಫೋಟೊ, ಮೆಸೇಜ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.