Visitors have accessed this post 882 times.
ಕಾಸರಗೋಡು: ಮೊಬೈಲ್ ವ್ಯಸನವನ್ನು ಪ್ರಶ್ನಿಸಿದ್ದಕ್ಕೆ ಮಗನಿಂದ ಕ್ರೂರವಾಗಿ ಹಲ್ಲೆಗೊಳಗಾದ 63 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಕೇರಳದ ಕಣ್ಣೂರು ಜಿಲ್ಲೆಲ್ಲಿ ನಡೆದಿದೆ.
ಮೃತಳನ್ನು 63 ವರ್ಷದ ರುಗ್ಮಿಣಿ ಎಂದು ಗುರುತಿಸಲಾಗಿದೆ. ಈಕೆ ಕಣ್ಣೂರು ಜಿಲ್ಲೆಯ ಕನಿಚಿರ ನಿವಾಸಿಯಾಗಿದ್ದು, ಕಳೆದ ಒಂದು ವಾರದ ಹಿಂದೆ ಆಕೆಯ ಮಗ ಸುಜಿತ್ ತನ್ನಆಕೆಯ ತಲೆಯನ್ನು ಗೋಡೆಗೆ ಹೊಡೆದು ಹಲ್ಲೆ ಮಾಡಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೇ ತಾಯಿ ಶನಿವಾರ ಕೊನೆಯುಸಿರೆಳೆದಿದ್ದಾಳೆ.
ಹೆಚ್ಚಾಗಿ ಮೊಬೈಲ್ ಬಳಸಬೇಡ ಎಂದಿದ್ಕೆ ಮಗ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.