Visitors have accessed this post 444 times.
ಪುತ್ತೂರು: ಕೆಯ್ಯೂರು ಗ್ರಾಮದ ಎರಕ್ಕಲ ಬಳಿ ಸ್ನೇಹಿತರೊಂದಿಗೆ ಈಜಲು ತೆರಳಿ ಬಳಿಕ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.
ಮೃತರನ್ನು ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ತಸ್ಲೀಮ್ (17) ಎಂದು ಗುರುತಿಸಲಾಗಿದೆ. ಈತ ಸುಳ್ಯದ ಅರಂತೋಡಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು ರಜೆಯಲ್ಲಿ ಊರಿಗೆ ಬಂದಿದ್ದ ಎನ್ನಲಾಗಿದೆ. ತಸ್ಲೀಮ್ ಅ. 15ರಂದು ಸಂಜೆ ಸ್ನೇಹಿತರೊಂದಿಗೆ ಎರಕ್ಕಲ ಸಮೀಪದ ಗೌರಿ ಹೊಳೆಗೆ ಈಜಲು ತೆರಳಿದ್ದ ವೇಳೆ ಘಟನೆ ನಡೆದಿದೆ. ತಸ್ಲೀಮ್ ನಾಪತ್ತೆಯಾಗುತ್ತಿದ್ದಂತೆ ಉಳಿದ ಸ್ನೇಹಿತರು ಮನೆಯವರಿಗೆ, ಸ್ಥಳೀಯರಿಗೆ ವಿಷಯ ತಲುಪಿಸಿದ್ದರು ತಕ್ಷಣ ಸ್ಥಳೀಯರು, ಮುಳುಗು ತಜ್ಞರು ಬಂದು ಹುಡುಕಾಟ ಮುಂದುವರಿಸಿದ್ದರು. ಅದರೂ, ಮೃತದೇಹ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಹುಡುಕಾಟ ಮುಂದುವರಿಸಿದಾಗ ಈಜಲು ತೆರಳಿದ್ದ ಸ್ಥಳದ ಸನಿಹವೇ ಮೃತದೇಹ ಪತ್ತೆಯಾಗಿದೆ.