ರಿಮೋಟ್ ಗಾಗಿ ಗಲಾಟೆ – ಕತ್ತರಿ ಎಸೆದು ಮಗನ ಕತ್ತು ಸೀಳಿದ ಅಪ್ಪ

ಚಿತ್ರದುರ್ಗ : ಟಿವಿ ರಿಮೋಟ್​​ಗಾಗಿ ಇಬ್ಬರು ಮಕ್ಕಳು ಗಲಾಟೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ತಂದೆ ಕತ್ತರಿ ಎಸೆದ ಪರಿಣಾಮ ಹಿರಿಯ ಮಗನ ಕತ್ತು ಸಿಳಿ ಸಾವನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಈ ಘಟನೆ ನಡೆದಿದೆ.

ಮೃತನನ್ನು ಚಂದ್ರಶೇಖರ್ (16) ಎಂದು ಗುರುತಿಸಲಾಗಿದೆ. ಲಕ್ಷ್ಮಣಬಾಬು ಕತ್ತರಿ ಎಸೆದ ತಂದೆ ಎಂದು ತಿಳಿದುಬಂದಿದೆ. ಚಂದ್ರಶೇಖರ್ ಮತ್ತು ಆತನ ಸಹೋದರ ಪವನ್ ಕುಮಾರ್(14) ಟಿವಿ ಶೋ ವೀಕ್ಷಿಸಲು ರಿಮೋಟ್ ಗಾಗಿ ಜಗಳವಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಲಕ್ಷ್ಮಣ್ ಬಾಬು ಚಂದ್ರಶೇಖರ್ ಮೇಲೆ ಕತ್ತರಿ ಎಸೆದಿದ್ದಾರೆ. ಕತ್ತರಿ ಸೀದಾ ಬಾಲಕನ ಗಂಟಲಿಗೆ  ಚುಚ್ಚಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಶೇಖರ್ ನನ್ನು ಆತನ ತಾಯಿ ಲಕ್ಷ್ಮಿ ಮೊಳಕಾಲ್ಮೂರಿನ ತಾಲೂಕು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿನ ವೈದ್ಯರು ಚಂದ್ರಶೇಖರ್ ನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದರು.

ಬಳ್ಳಾರಿಗೆ ತೆರಳುವ ಮಾರ್ಗ ಮಧ್ಯೆ ಚಂದ್ರಶೇಖರ್ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಕ್ಷ್ಮಣ್ ಬಾಬು ಅವರನ್ನು ವಶಕ್ಕೆ ಪಡೆದಿದ್ದಾರೆ.

Leave a Reply