August 30, 2025
WhatsApp Image 2023-10-18 at 9.00.58 AM

ಮಂಗಳೂರು: 8ನೇ ತರಗತಿ ಬಾಲಕನೊಬ್ಬನನ್ನು ಡೆಂಗ್ಯೂ ಜ್ವರ ಬಲಿ ಪಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅತ್ತಾವರ ಏಳನೇ ಕ್ರಾಸ್ ರಸ್ತೆಯ ನಿವಾಸಿಯಾಗಿರುವ ಸೋನಿ ಮತ್ತು ಆಲ್ಫೋನ್ಸ್ ಅವರ ಪುತ್ರ ಆಶೀಶ್ ಡಿಸೋಜಾ(13) ಮೃತ ಬಾಲಕ. ತೀವ್ರ ಜ್ವರದಿಂದ ಬಳಲುತ್ತಿದ್ದ ಸೋನಿ ಮತ್ತು ಆಲ್ಫೋನ್ಸ್ ರ ಇಬ್ಬರು ಪುತ್ರರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಈ ಪೈಕಿ 13ರ ಹರೆಯದ ಆಶೀಶ್ ಸೋಮವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಶಿಶ್ ನ ಅಣ್ಣ ಡಿಸ್ಚಾರ್ಜ್ ಮಾಡಲಾಗಿದೆ. ಆಶೀಶ್ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸದಾ ಚುರುಕುತನದಿಂದಿದ್ದ ಆಶಿಶ್ ಇಗರ್ಜಿಯ ಬಲಿಪೀಠ ಸೇವಾ ಸಂಘದ ಸಕ್ರೀಯ ಸದಸ್ಯನಾಗಿದ್ದ ಎನ್ನಲಾಗಿದೆ. ಅತ್ತಾವರ ಸಹಿತ ನಗರದ ಅನೇಕ ಕಡೆ ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ತೀವ್ರ ಗತಿಯಲ್ಲಿ ಹರಡುತ್ತಿದ್ದರೂ ಪಾಲಿಕೆಯ ಆರೋಗ್ಯ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ ಅಂತಾ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

About The Author

Leave a Reply