
ಮೈಸೂರು:ಸಾಕಲು ಆಗುತ್ತಿಲ್ಲವೆಂದು ತನ್ನ ಸ್ವಂತ ಮದೂವರೆ ವರ್ಷದ ಮಗುವನ್ನೇ ತಂದೆಯೊಬ್ಬ ಕೊಂಡಿದ್ದಾನೆ. ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡಿನಲ್ಲಿ ನಡೆದಿದೆ.



ಈತನಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಗಂಡು ಮಗುವಿಗೆ ಜನ್ಮ ನೀಡುವ ವೇಳೆ ಸಾವನ್ನಪ್ಪಿದ್ದಾರೆ.
ಆದರೆ, ಈ ಸಣ್ಣ ಮಗುವನ್ನು ಸಾಕಲು ಆಗುತ್ತಿಲ್ಲವೆಂದು ಇಬ್ಬರು ಹೆಣ್ಣು ಮಕ್ಕಳನ್ನು ಅಜ್ಜಿ ತಾತನ ಜೊತೆ ಬಿಟ್ಟು ಒಂದೂವರೆ ವರ್ಷದ ಮಗುವನ್ನು ಕೊಂಡುಹೋಗಿ ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ.
2014 ರಲ್ಲಿ ಗಣೇಶ್ ಬೆಂಗಳೂರಿನ ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ನಾರಾಯಣ ಸ್ವಾಮಿ ಎಂಬುವವರ ಮಗಳು ಲಕ್ಷ್ಮೀ ಎಂಬುವವರನ್ನು ಮದುವೆಯಾಗಿದ್ದರು. ದೇವನಹಳ್ಳಿಯಲ್ಲಿಯೆ ವಾಸವಿದ್ದ ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದರು.
ಮೂರನೆ ವೇಳೆ ಗಂಡು ಮಗು ಹೆತ್ತು ತಾಯಿ ಮೃತಪಟ್ಟಿದ್ದಾರೆ. ಆಗ ಗಣೇಶ್ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಅಜ್ಜಿ ತಾತನ ಬಳಿ ಬಿಟ್ಟು ಮಾಕೋಡಿಗೆ ವಾಪಾಸ್ ಆಗಿದ್ದಾನೆ.ಅಲ್ಲಿ ತನ್ನ ಒಂದೂವರೆ ವರ್ಷದ ಮಗುವನ್ನು ಕರೆ ತಂದಿದ್ದನು.ಆದರೆ ಆ ಮಗುವನ್ನು ಆಗುತ್ತಿಲ್ಲವೆಂದು ಕೆರೆಗೆ ಎಸೆದು ಕೊಂದೇ ಬಿಟ್ಟಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಠಾಣಾ ಪೊಲೀಸರು, ಆರೋಪಿ ಗಣೇಶ್ನನ್ನು ಬಂದಿಸಿದ್ದಾರೆ.