Visitors have accessed this post 651 times.

BIG NEWS: ಪಡಿತರ ಚೀಟಿದಾರರ ಖಾತೆಗೆ ಹಣ ಪಾವತಿ ಮುಂದುವರಿಕೆ: ಸದ್ಯಕ್ಕೆ 10 ಕೆಜಿ ಅಕ್ಕಿ ಇಲ್ಲ

Visitors have accessed this post 651 times.

ಬೆಂಗಳೂರು: ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಹೊಂದಿಸಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿ ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಹಣ ನೀಡುವುದನ್ನು ಮುಂದುವರಿಸಲಾಗುತ್ತದೆ.

ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗುವುದು.

ಆಹಾರ ಇಲಾಖೆ ಸಚಿವ ಕೆಎಸ್ ಮುನಿಯಪ್ಪ ಇತ್ತೀಚೆಗೆ ಅಕ್ಟೋಬರ್ ನಿಂದ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದರು. ಸದ್ಯಕ್ಕೆ 10 ಕೆಜಿ ಅಕ್ಕಿ ಇಲ್ಲ. 5 ಕೆಜಿ ಅಕ್ಕಿ ಹಣ ಖಾತೆಗೆ ಜಮಾ ಮಾಡಲಾಗುವುದು.

Leave a Reply

Your email address will not be published. Required fields are marked *