August 30, 2025
WhatsApp Image 2023-10-22 at 12.04.59 PM

ಮಂಗಳೂರು: ಯಾವುದೇ ಮಾಹಿತಿ ಇಲ್ಲದೆ ತನ್ನ ಬ್ಯಾಂಕ್ ಖಾತೆಯಿಂದ ಅಪಾರ ಮೌಲ್ಯದ ನಗದು ಕಡಿತಗೊಂಡು ಇತರ ಯಾರೋ ಅಪರಿಚಿತ ವ್ಯಕ್ತಿಗಳಿಗೆ ಹಣ ವರ್ಗಾವಣೆಗೊಂಡಿರುವುದಾಗಿ ಹಣ ಕಳೆದುಕೊಂಡಿರುವ ವ್ಯಕ್ತಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರುದಾರರಾದ ಅಬ್ದುಲ್ ಸಲೀಂ ಅವರ ಕೆನರಾ ಬ್ಯಾಂಕ್ ನರಿಂಗಾನ ಶಾಖೆ, ಕೆನರಾ ಬ್ಯಾಂಕ್‌ನ ಫಿಷರಿಸ್ ಖಾತೆ, ಕೆನರಾ ಬ್ಯಾಂಕ್‌ ದೇರಳಕಟ್ಟೆ ಶಾಖೆ ಹಾಗೂ ಯೂನಿಯನ್‌ ಬ್ಯಾಂಕ್ ದೇರಳಕಟ್ಟೆ ಶಾಖೆಯಿಂದ ಒಟ್ಟು 2,48,100 ರೂ., ಬೇರೆ ಬೇರೆ ದಿನಾಂಕಗಳಲ್ಲಿ ಕಡಿತಗೊಂಡಿದೆ. ಈ ಬಗ್ಗೆ ಬ್ಯಾಂಕ್‌ಗೆ ಲಿಂಕ್ ಆದ ಮೊಬೈಲ್‌ ನಿಂದ ಮಾಹಿತಿ ಬಂದ ಬಳಿಕ ಈ ಬಗ್ಗೆ ದೂರುದಾರರು ಬ್ಯಾಂಕ್‌ಗೆ ಹೋಗಿ ಪರಿಶೀಲಿಸಿದಾಗ ಅಬ್ದುಲ್ ಹೈ, ಅಬ್ದೇಶ್ ರಾಯ್, ಧರ್ಮದಾಸ್ ದಿಬಾ‌ರ್, ಬಿಪ್ಲಬ್ ಪಾಲ್ ಎಂಬವರ ಖಾತೆಗಳಿಗೆ ವರ್ಗಾವಣೆಗೊಂಡಿರುವುದು ಕಂಡು ಬಂದಿದೆ. ವಂಚನೆಗೊಳಗಾದ ವ್ಯಕ್ತಿ ತನ್ನ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡು ಬೇರೆ ಅಪರಿಚಿತ ವ್ಯಕ್ತಿಗಳ ಖಾತೆಗಳಿಗೆ ವರ್ಗಾವಣೆಗೊಂಡಿರುವ ಬಗ್ಗೆ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply