
ಪುತ್ತೂರು: ಬೆಳ್ಳಾರೆಯಿಂದ ಪುತ್ತೂರು ಈಶ್ವರಮಂಗಲ ಕಡೆಗೆ ತೆರಳುತ್ತಿದ್ದ ಮದುವೆ ದಿಬ್ಬಣದ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಪಾಲ್ತಾಡಿ ಬಳಿ ನಡೆದಿದೆ.



ಘಟನೆಯಲ್ಲಿ ಈಶ್ವರಮಂಗಲ ಮೂಲದ ವರನ ಕಡೆಯ ಸಂಬಂಧಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು ಟೆಂಪೋದಲ್ಲಿ ಮಹಿಳೆಯರು ಕೂಡಾ ಇದ್ದರು. ಗಾಯಾಳುಗಳನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.