ಸುದ್ದಿವಾಹಿನಿ ಚರ್ಚೆಯ ನೇರಪ್ರಸಾರದಲ್ಲಿ ಬಿಜೆಪಿ ನಾಯಕನ ಮೇಲೆ

ಹೈದರಾಬಾದ್: ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತೆಲುಗು ಸುದ್ದಿ ವಾಹಿನಿ ನಡೆಸಿದ ಬಹಿರಂಗ ಚರ್ಚೆ ಬುಧವಾರ ಬಿಆರ್ ಎಸ್ ಶಾಸಕ ಮತ್ತು ಅವರ ಬಿಜೆಪಿ ಪ್ರತಿಸ್ಪರ್ಧಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಪೊಲೀಸರು ಮತ್ತು ಇತರರು ಮಧ್ಯಪ್ರವೇಶಿಸಿ ಇಬ್ಬರನ್ನು ಶಾಂತಗೊಳಿಸಿರುವ ವಿಡಿಯೋ ವೈರಲ್ ಆಗಿದೆ.

 

ಹೈದರಾಬಾದ್ನ ಕುತ್ಬುಲ್ಲಾಪುರದ ಬಿಆರ್‌ಎಸ್ ಶಾಸಕ ಕೆ.ಪಿ.ವಿವೇಕಾನಂದ ಅವರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುನಾ ಶ್ರೀಶೈಲಂ ಗೌಡ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಆರೋಪಿಸಿದ್ದಾರೆ. ವಿವೇಕಾನಂದ ಗೌಡರ ಕತ್ತು ಹಿಡಿದು ಹಲ್ಲೆ ನಡೆಸಿರುವುದು ಹೇಡಿತನದ ಕೃತ್ಯ ಎಂದು ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಆರ್‌ಎಸ್ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು, ಇಲ್ಲದಿದ್ದರೆ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

Leave a Reply