ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವತಿಯಿಂದ ಸುರತ್ಕಲ್ ಬ್ಲಾಕ್ ಸಮಿತಿಯ ಪಕ್ಷದ ಸಮಾವೇಶವು ಎಸ್ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರ ಅಧ್ಯಕ್ಷತೆಯಲ್ಲಿ ಎಂ.ಜೆ.ಎಂ ಹಾಲ್ ಚೊಕ್ಕಬೆಟ್ಟುವಿನಲ್ಲಿ ನಡೆಯಿತು.
ಕ್ಷೇತ್ರ ಕಾರ್ಯದರ್ಶಿ ಅಝರ್ ಉಳಾಯಿಬೆಟ್ಟು ಸ್ವಾಗತವನ್ನು ಮಾಡಿದರು. ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಪ್ರಸ್ತಾವಿಕ ಮಾತಾಡಿ ಬಿಜೆಪಿ ಮತ್ತು ಫ್ಯಾಸಿಸ್ಟರನ್ನು ದೂರವಿಟ್ಟು ಕೈ ಜೋಡಿಸುವುದಾದರೆ ಯಾರೊಂದಿಗೂ ಮೈತ್ರಿಗೆ ತಯಾರಿದೆ ಎಂದು ಹೇಳಿದರು. ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್ ರವರು ಮಾತಾಡಿ ದಿನದ 24*7 ವರ್ಷದ 365 ದಿನಗಳಲ್ಲಿ ಜನರ, ರಾಜ್ಯದ ಮತ್ತು ದೇಶದ ಬಗ್ಗೆ ಯೋಚನೆಯನ್ನು ಮಾಡುವ ಎಸ್ಡಿಪಿಐ ಯನ್ನು ಬಲಪಡಿಸುವ ಜವಾಬ್ದಾರಿ ಎಲ್ಲರಿಗೂ ಇದೆ ಹಾಗೂ ಈಗಿನ ಸ್ಥಿತಿಗತಿಗಳ ವಿಷಯ ಬಗ್ಗೆ ಪ್ರಸ್ತಾಪಿಸಿ ಎಸ್ಡಿಪಿಐ ಪಕ್ಷದ ಅಗತ್ಯತೆಯನ್ನು ತಿಳಿಸಿದರು. ಕಾರ್ಯಕ್ರಮದ ಸಮಾರೋಪದಲ್ಲಿ ಎಸ್ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆಯವರು ಪಕ್ಷದ ಅನಿವಾರ್ಯತೆಯನ್ನು ತಿಳಿಸಿ ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.. ಎಸ್ಡಿಪಿಐ ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಸದಸ್ಯ ಶಂಶುದ್ದೀನ್ ಕೃಷ್ಣಾಪುರ ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿ ಧನ್ಯವಾದ ಅರ್ಪಿಸಿದರು..
ಈ ಕಾರ್ಯಕ್ರಮದಲ್ಲಿ ನಾಸಿರ್ ಉಳಾಯಿಬೆಟ್ಟು ( ಉಪಾಧ್ಯಕ್ಷರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ), ನೂರುಲ್ಲ ಕುಳಾಯಿ ( ಕಾರ್ಯದರ್ಶಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ), ಶಂಶಾದ್ ಅಬೂಬಕ್ಕರ್ ( ಸದಸ್ಯರು ಮಂಗಳೂರು ಮಹಾನಗರ ಪಾಲಿಕೆ), ಸುರತ್ಕಲ್ ಬ್ಲಾಕ್ ಅಧ್ಯಕ್ಷ ಸಲಾಂ ಕಾನ, ಕ್ಷೇತ್ರ ಸಮಿತಿ ನಾಯಕರು, ಬ್ಲಾಕ್ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಮತ್ತು ಬೆಂಬಲಿಗರು ಉಪಸ್ಥಿತರಿದ್ದರು.