October 13, 2025
WhatsApp Image 2023-10-30 at 10.41.20 PM (1)

ಬಂಟ್ವಾಳ: ಸರ್ವ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ ನನ್ನ ಅವಧಿಯಲ್ಲಿ ಅತೀ ಹೆಚ್ಚು ಅನುದಾನ ನೀಡಿದ ಹೆಮ್ಮೆಯಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಬೋಳಂತೂರು ಅಶ್ ಅರಿಯಾ ನಗರದಲ್ಲಿ ನೂತನ ಸುಸಜ್ಜಿತ ಕಾಂಕ್ರೀಟ್ ರಸ್ತೆ ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.ನಾನು ಶಾಸಕ, ಸಚಿವನಾಗಿದ್ದ ಸಂದರ್ಭದಲ್ಲಿ ಜಾತಿಮತ ನೋಡದೇ ಬೇಧಭಾವ ಮಾಡದೇ ಎಲ್ಲಾ ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಮಸೀದಿ, ಚರ್ಚುಗಳಿಗೆ ಸಮಾನವಾಗಿ‌ ಹಂಚುವ ಮೂಲಕ ರಸ್ತೆ, ತಡೆಗೋಡೆ, ಹೈಮಾಸ್ಕ್ ದೀಪಗಳನ್ನು ಕೊಡುವ ಮೂಲಕ ಜಿಲ್ಲೆಯಲ್ಲೇ ಅತೀಹೆಚ್ಚು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅನುದಾನ ವಿನಿಯೋಗಿಸಿದ ಹೆಮ್ಮೆ ನನಗಿದೆ ಎಂದು ಹೇಳಿದರು. ಅಲ್ಲದೇ ಈ ಆತ್ಮೀಯ ಸಂಗಮ ಕೇಂದ್ರ ಧಾರ್ಮಿಕ ಯತೀಂಖಾನ, ಆಂಗ್ಲ ಶಿಕ್ಷಣ ಮಾದ್ಯಮ ಸೇರಿದಂತೆ ಕೊಳ್ನಾಡು ಭಾಗದ ಹಲವಾರು ವಸತಿ ಕೇಂದ್ರಗಳಿಗೆ ಸಂಪರ್ಕಿಸುವ ಇಕ್ಕಾಟ್ಟಾಗಿದ್ದ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಿದ್ದೇನೆ. ಇಲ್ಲಿನ ಧಾರ್ಮಿಕ ಕಾರ್ಯಕ್ರಮಕ್ಕೆ ಈ ಹಿಂದೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ನನಗೆ ಇಲ್ಲಿನ ಮ್ಯಾನೇಜರ್ ಮಹಮ್ಮದ್ ಅಲಿ ಸಖಾಫಿ ಹಾಗೂ ಉದ್ಯಮಿ ಸುಲೈಮಾನ್ ಸಿಂಗಾರಿ ಹಾಜಿಯವರು ಮನವಿ ಸಲ್ಲಿಸಿದಾಗ, ವೇದಿಕೆಯಲ್ಲಿದ್ದ ಈ ಭಾಗದ ಮುಖಂಡರುಗಳಾದ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂ‌.ಎಸ್.ಮಹಮ್ಮದ್ ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಪಂಚಾಯತ್ ರಾಜ್ ಸಂಘಟನೆಯ ಮುಖಂಡರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರಿಗೆ, ನಾನು ತಕ್ಷಣವೇ ಗುತ್ತಿಗೆದಾರರನ್ನು ಸಂಪರ್ಕಿಸಬೇಕು. ಈ ಸಂಸ್ಥೆಗೆ 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಆಚರಿಸುತ್ತಿರುವ ಶೈಕೂನ ಮರ್ಹೂಂ ಸುರಿಬೈಲ್ ಉಸ್ತಾದರ ಆಂಡ್ ನೇರ್ಚೆ, ಸಿಲ್ವರ್ ಜುಬಿಲಿಯ ಮುಂಚಿತವಾಗಿ ದುರಸ್ತಿ ಕಾರ್ಯ ಮಾಡಬೇಕೆಂದು ತಿಳಿಸಿದ್ದನ್ನು ರೈಯವರು ನೆನಪಿಸಿಕೊಂಡರು. ಅದನ್ನು ಮುತುವರ್ಜಿ ವಹಿಸಿ ಶೀಘ್ರವಾಗಿ ಕಾಮಾಗಾರಿ ಪೂರ್ತಿಗೊಳಿಸಿದಕ್ಕೆ ಅಭಿನಂದಿಸಿದರು. ಅಲ್ಲದೇ13 ಲಕ್ಷದ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವುದು ವಾಹನಗಳ ಸಂಚಾರಕ್ಕೆ ಅನುಕೂಲವಾಗಿದೆ. ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸಿದ ಸಂತೃಪ್ತಿ ನನಗಿದೆ ಎಂದು ರೈ ಹೇಳಿದರು. ಬಳಿಕ ಎಂ.ಎಸ್.ಮಹಮ್ಮದ್, ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ಮಾತನಾಡುತ್ತಾ ಅಶ್ ಅರಿಯಾ ಶಿಕ್ಷಣ ಸಂಸ್ಥೆಯಲ್ಲಿನ ನವೆಂಬರ್ 1,2,3, ಕ್ಕೆ ನಡೆಯುವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.

ಈ ಪುಣ್ಯಕ್ಷೇತ್ರದ ಕಾಮಗಾರಿಗೆ ಸಹಕರಿಸಿ ಅನುದಾನ ನೀಡಿದ ಮಾಜಿ ಸಚಿವರಾದ ಶ್ರೀ. ಬಿ.ರಮನಾಥ ರೈ ಹಾಗೂ ಇದಕ್ಕೆ ಬೆನ್ನೆಲುಬಾಗಿ ನಿಂತು follow up ಮಾಡಿ ಸಹಕರಿಸಿದ ಎಂ.ಎಸ್.ಮಹಮ್ಮದ್, ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಯವರನ್ನು ಸಂಸ್ಥೆಯ ಧರ್ಮಗುರುಗಳು ಶಾಲು ಹೊದಿಸಿ ಸನ್ಮಾನಿಸಿದರು.

ಈ ಶುಭಸಂಧರ್ಭದಲ್ಲಿ ಅಶ್ ಅರಿಯಾ ಧಾರ್ಮಿಕ, ಲೌಕಿಕ ಶಿಕ್ಷಣ ಸಂಸ್ಥೆಗಳ ಮ್ಯಾನೇಜರ್ ಮಹಮ್ಮದ್ ಅಲಿ ಸಖಾಫಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂ.ಎಸ್‌.ಮಹಮ್ಮದ್, ಕೊಳ್ನಾಡು ಗ್ರಾ.ಪಂಚಾಯತ್ ಮಾಜಿ ಅದ್ಯಕ್ಷರೂ, ಜಿಲ್ಲಾ ಪಂಚಾಯತ ರಾಜ್ ಸಂಘಟನೆಯ ಮುಖಂಡರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಸಂಸ್ಥೆಯ ಹಿತೈಷಿ, ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಉದ್ಯಮಿ ಹಾಜಿ ಎನ್.ಸುಲೈಮಾನ್ ಹಾಜಿ ಸಿಂಗಾರಿ, ಮಂಚಿ ಗ್ರಾ.ಪಂಚಾಯತ್ ಅದ್ಯಕ್ಷರಾದ ಜಿ.ಎಮ್.ಇಬ್ರಾಹಿಂ, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಮೀದ್ ಸುರಿಬೈಲ್, ಸಮಾಜಸೇವಕ ಖಾದರ್ ಕೆ‌.ಪಿ.ಬೈಲ್,ಯಾಕೂಬ್ ನಾರ್ಶ, ವಿದ್ಯಾರ್ಥಿಗಳು, ಸ್ಥಳೀಯರು ಉಪಸ್ಥಿತರಿದ್ದರು.

About The Author

Leave a Reply