Visitors have accessed this post 319 times.
ಮಂಗಳೂರು: ಪಾರ್ಟ್ ಟೈಮ್ ಉದ್ಯೋಗ ನೀಡುವ ಆಮಿಷದಲ್ಲಿ ವ್ಯಕ್ತಿಯೋರ್ವರಿಂದ 6.50 ಲಕ್ಷ ರೂ. ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ವ್ಯಕ್ತಿಗೆ ಅ.16ರಂದು ವ್ಯಕ್ತಿಯೋರ್ವ ಟೆಲಿಗ್ರಾಂ ಖಾತೆಯ ಮೂಲಕ ಪಾರ್ಟ್ ಟೈಂ ಉದ್ಯೋಗಕ್ಕೆ ಸಂಬಂಧಿಸಿ ಸಂದೇಶ ಕಳುಹಿಸಿದ್ದ. ಟ್ಯೂನ್ ಕಂಪೆನಿಯ ಉತ್ಪನ್ನಗಳಿಗೆ ರೇಟಿಂಗ್ಸ್ ನೀಡುವ ಕೆಲಸವನ್ನು ಮಾಡಿದರೆ ಅದಕ್ಕೆ ಪ್ರತಿಯಾಗಿ ಕಮಿಷನ್ ಮತ್ತು ಬೋನಸ್ ನೀಡುವುದಾ ಗಿಯೂ ಕೆಲಸವನ್ನು ಆರಂಭಿಸಲು ಮೂಲದರವನ್ನು ನೀಡುವಂತೆಯೂ ತಿಳಿಸಿದ್ದ. ಇದನ್ನು ನಂಬಿದ ದೂರುದಾರರು ಆರಂಭದಲ್ಲಿ 10,077 ರೂ. ಪಾವತಿಸಿ ಕೆಲಸ ಆರಂಭಿಸಿದ್ದರು ಎನ್ನಲಾಗಿದೆ. ಅನಂತರ ಅವರಿಂದ ಲಕ್ಷುರಿ ಪ್ರಾಡಕ್ಟ್ ನೆಪದಲ್ಲಿ ಅ.18ರಿಂದ 26ರವರೆಗೆ ಹಂತ ಹಂತವಾಗಿ 6.50 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ಯಾವುದೇ ಹಣ ಮರುಪಾವತಿ ಮಾಡದೆ ಮೋಸ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.