Visitors have accessed this post 507 times.
ಉಪ್ಪಿನಂಗಡಿ : ಪಡೆದುಕೊಂಡ ಹಣವನ್ನು ಹಿಂದಿರುಗಿಸಲು ವಿಳಂಬಿಸಿದ್ದಾರೆಂದು ಆರೋಪಿಸಿ ದಂಪತಿಗೆ ತಂಡವೊಂದು ಹಲ್ಲೆ ನಡೆಸಿರುವುದು ವರದಿಯಾಗಿದೆ. ಹಲ್ಲೆಗೊಳಗಾದವರನ್ನು ಬಜತ್ತೂರು ಗ್ರಾಮದ ಮಣಿಕ್ಕಳ ಮನೆ ನಿವಾಸಿ ಉಷಾ (30), ಇವರ ಪತಿ ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಇವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುರೇಶ್, ಉಮೇಶ್, ಗಿರೀಶ್ ಇನ್ನೋರ್ವ ಗುಂಪುಗೂಡಿ ಬಂದು ಉಷಾರ ಮೈ ಮೇಲೆ ಕೈ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ, ದೊಣ್ಣೆಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ರಕ್ಷಿಸಲು ಬಂದ ಪತಿ ಕೃಷ್ಣಪರ ಮೇಲೂ ಕೋಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ದಂಪತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.