Visitors have accessed this post 404 times.
ಬೆಂಗಳೂರು: ಕಳೆದ 15 ದಿನಗಳಿಂದ ಏರುಗತಿಯಲ್ಲಿ ಸಾಗಿ ಶತಕ ಬಾರಿಸಿದ್ದ ಈರುಳ್ಳಿ ದರ ಇಳಿಮುಖವಾಗಿದೆ. ರಾಜ್ಯದ ಮಾರುಕಟ್ಟೆಗಳಿಗೆ ಮಹಾರಾಷ್ಟ್ರ ಈರುಳ್ಳಿ ಬರತೊಡಗಿದ್ದು, ದಿಢೀರ್ ಏರಿಕೆ ಕಂಡಿದ್ದ ಈರುಳ್ಳಿ ದರ ಕಡಿಮೆಯಾಗತೊಡಗಿದೆ.
ಒಂದು ತಿಂಗಳ ಹಿಂದೆ ಟೊಮೆಟೊ ದರ ಗಗನಕ್ಕೇರಿ ಹೊಸ ದಾಖಲೆಯನ್ನೇ ಬರೆದಿತ್ತು.
ಈಗ ಈರುಳ್ಳಿ ಕೂಡ ಅದೇ ಹಾದಿಯಲ್ಲಿ ಸಾಗಿತ್ತು. ಚಿಕ್ಕಮಗಳೂರಿನಲ್ಲಿ 100 ರೂಪಾಯಿ ಗಡಿ ದಾಟಿತ್ತು. ರಾಜ್ಯದ ವಿವಿಧೆಡೆ ಕೆಜಿ ಈರುಳ್ಳಿಗೆ 70, 80, 90 ರೂಪಾಯಿವರೆಗೂ ಮಾರಾಟವಾಗಿತ್ತು.
ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತವಾಗಿದ್ದು, ಅಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ. ರಾಜ್ಯದ ಮಾರುಕಟ್ಟೆಗಳಿಗೆ ಮಹಾರಾಷ್ಟ್ರ ಈರುಳ್ಳಿ ಬರತೊಡಗಿದ್ದು, ದರ ಇಳಿಕೆಯತ್ತ ಸಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.