November 8, 2025
WhatsApp Image 2023-11-05 at 12.08.35 PM

17 ವರ್ಷದ ಬಾಲಕನಿಗೆ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.

ನಗರದ ಪೇಟೆಚಾಮನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಹತ್ಯೆ ನಡೆದಿದೆ. ಕೊಲೆಯಾದ ಯುವಕನನ್ನು ಕಾರ್ತಿಕ್ ಸಿಂಗ್(17)ಎಂದು ಗುರುತಿಸಲಾಗಿದೆ.

ಕೋಲಾರದ ಬೈಪಾಸ್‌ ರಸ್ತೆಯಲ್ಲಿರುವ ಎಸ್‌ಡಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಾರ್ತಿಕ್‌ನನ್ನು ಆರೋಪಿಗಳು ಶುಕ್ರವಾರ ರಾತ್ರಿ 8 ಗಂಟೆ ಪೇಟೆಚಾಮನಹಳ್ಳಿ ಬಡಾವಣೆಯ ಶಾಲೆ ಆವರಣಕ್ಕೆ ಕರೆಸಿಕೊಂಡು ಹತ್ಯೆ ಮಾಡಿದ್ದಾರೆ. ಹತ್ಯೆಗೂ ಮುನ್ನ ಬಾಲಕನಿಗೆ ಚಿತ್ರ ಹಿಂಸೆ ಕೊಟ್ಟಿದ್ದಾರೆ. ಬಟ್ಟೆ ಬಿಚ್ಚಿಸಿ ಮೈ ಕೈಗೆ ಗಾಜು,ಚಾಕು,ಬ್ಲೇಡ್‌ನಿಂದ ಕೊಯ್ದಿದ್ದಾರೆ. ಇದನ್ನು ವಿಡಿಯೊ ಕೂಡ ಮಾಡಿದ್ದಾರೆ.

ನನ್ನ ಮಗ ಶುಕ್ರವಾರ ಹೊಟ್ಟೆ ನೋವು ಎಂದು ಕಾಲೇಜಿಗೆ ಹೋಗಿರಲಿಲ್ಲ. ಮಧ್ಯಾಹ್ನದವರೆಗೆ ಮನೆಯಲ್ಲೇ ಮಲಗಿಕೊಂಡಿದ್ದ. ಸಂಜೆ ಎಲ್ಲೋ ಹೋಗಿದ್ದ. ಕರೆ ಮಾಡಿದಾಗ ಫೋನ್ ಸ್ವಿಚ್ಡ್‌ ಆಫ್‌ ಆಗಿತ್ತು. ಆತನ ಕೊಲೆಯಾಗಿರುವ ಬಗ್ಗೆ ರಾತ್ರಿ 8.30ರ ಸುಮಾರಿಗೆ ಸಂಬಂಧಿಯೊಬ್ಬರು ಹೇಳಿದರು.ಪುತ್ರನ ಜೊತೆ ಇರುತ್ತಿದ್ದ ವ್ಯಕ್ತಿಯೇ ಕೊಲೆ ಮಾಡಿರುವ ಶಂಕೆ ಇದ್ದು,ಆತನಿಗೆ ಶಿಕ್ಷೆ ಕೊಡಬೇಕು ಎಂದು ಕಾರ್ತಿಕ್‌ ತಾಯಿ ಸುಶೀಲಾ ಹೇಳಿದ್ದಾರೆ.

About The Author

Leave a Reply