ಪುತ್ತೂರು,ಯುವ ಕಲಾವಿದ ಅಕ್ಷಯ್ ಹತ್ಯೆ ಎಸ್‌ಡಿಪಿಐ ದಿಗ್ಬ್ರಮೆ..!

ಪುತ್ತೂರು: ನೆಹರು ನಗರ ಎಂಬಲ್ಲಿ ಯುವ ಕಲಾವಿದರ ಕಲ್ಲೇಗ ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗರವರವರನ್ನು ಕ್ಷುಲ್ಲಕ ವಿಚಾರಕ್ಕೆ ಮಾರಕಾಯುಧಗಳಿಂದ ಕಡಿದು ಕೊಲೆ ನಡೆಸಿದ ಪ್ರಕರಣಕ್ಕೆ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕೆಲವು ತಿಂಗಳ ಹಿಂದೆ ಪುತ್ತೂರು ಮಹಿಳಾ ಪೋಲಿಸ್ ಠಾಣೆಯ ಸಮೀಪವೇ ಪದ್ಮರಾಜ್ ಎಂಬ ಯುವಕನೋರ್ವ ಗೌರಿ ಎಂಬ ಯುವತಿಯನ್ನು ಚಾಕು ಇರಿದು ಹತ್ಯೆ ನಡೆಸಿದ್ದ.

ಇದೀಗ ಕ್ಷುಲ್ಲಕ ಕಾರಣಗಳಿಗಾಗಿ ಯುವ ಕಲಾವಿದರನ ಹತ್ಯೆ ನಡೆದಿರುವುದು ನಗರದ ಜನತೆಯಲ್ಲಿ ಭಯ ಮೂಡಿಸಿದೆ.

ಅದೇ ರೀತಿ ವಿಪರ್ಯಾಸವೆಂದರೆ ಇಂತಹ ಕೊಲೆಗಳಲ್ಲಿ ಆರೋಪಿಗಳು ಮುಸ್ಲಿಮರಾದರೆ ತಕ್ಷಣ ಎಚ್ಚೆತ್ತು ಭಯದ ವಾತಾವರಣ ಸೃಷ್ಟಿಸಿ,ಕೋಮು ಪ್ರಚೋದನಕಾರಿ ಹೇಳಿಕೆ ಕೊಟ್ಟು ಶಾಂತಿ ಸುವ್ಯವಸ್ಥೆ ಕೆಡಿಸುವ ಸಂಘಪರಿವಾರದ ಸಂಘಟನೆಗಳು ಹಾಗು ಬಿಜೆಪಿಯ ನಾಯಕರುಗಳು ಈ ಎರಡೂ ಪ್ರಕರಣಗಳಲ್ಲಿ ಮೌನಕ್ಕೆ ಜಾರಿರುವುದು ಇವರ ನೈಜ ಉದ್ದೇಶ ಮುಸ್ಲಿಮರ ವಿರುದ್ಧ ದ್ವೇಷ ಕಾರುವುದು ಮಾತ್ರ ಎಂದು ತೋರ್ಪಡಿಸಿದೆ.
ಒಂದು ವೇಳೆ ಇದೇ ಪ್ರಕರಣದಲ್ಲಿ ಆರೋಪಿಗಳು ಮುಸ್ಲಿಂ ನಾಮಾದಾರಿಗಳು ಆಗಿರುತ್ತಿದ್ದರೆ ಇಂದು ಪುತ್ತೂರಿನ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ತನಿಖೆಯಲ್ಲಿ ಯಾವುದೇ ಲೋಪದೋಷ ಬರದಂತೆ ನೋಡಿಕೊಂಡು ಕಠಿಣ ಶಿಕ್ಷೆಯಾಗುವಂತೆ ನೋಡಿಕೊಂಡು ಯುವಕನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಸೂಕ್ತ ಪರಿಹಾರ ದೊರಕಿಸಬೇಕು.ಮಾತ್ರವಲ್ಲ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ನಾಗರಿಕರ ಭದ್ರತೆಯನ್ನು ಖಾತ್ರಿಪಡಿಸಬೇಕೆಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Leave a Reply