November 8, 2025
WhatsApp Image 2023-11-08 at 10.34.11 AM

ಮಂಗಳೂರು : ಕಾರ್ಕಳ ಥೀಮ್ ಪಾರ್ಕಿನ ಪರಶುರಾಮ ಪ್ರತಿಮೆ ನಕಲಿಯಾಗಿದ್ದು ಇದು ಇಡೀ ಭಾರತಕ್ಕೆ ಕಾರ್ಕಳ ಶಾಸಕರು ಮಾಡಿದ ವಂಚನೆ, ನಂಬಿಕೆ ದ್ರೋಹವಾಗಿದೆ ಆದ್ದರಿಂದ ಶಾಸಕತ್ವದಿಂದ ಸುನೀಲ್ ಕುಮಾರ್ ಅಮಾನತು ಆಗಬೇಕು ಮತ್ತು ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಒತ್ತಾಯಿಸಿದ್ದಾರೆ.

ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಿಥುನ್ ರೈ ಪರಶು ಚಿರಂಜೀವಿಯಾಗಿದ್ದು ಇಂದೂ ಕೂಡ ಪರಶು ದೇವರು ಇದ್ದಾರೆ,ಅವರ ಸ್ಮರಣೆ ಮಾಡ್ತೇವೆ. ಇಲ್ಲಿನ ಬಹಳ ದೇವಾಲಯಗಳಿಗೆ ಪರಶುರಾಮನೇ ಅಧಿಪತಿ.ಆದರೆ ಹಿಂದುತ್ವದ ಭಾಷಣ ಮಾಡುವವರು ಪರಶು ವಿಗ್ರಹ ವಿಚಾರದಲ್ಲಿ ಇಷ್ಟು ದೊಡ್ಡ ಮೋಸ ಆಗುವಾಗ ಯಾಕೆ ಮಾತನಾಡುತ್ತಿಲ್ಲ? ಈ ಸಂದರ್ಭದಲೂ ಧ್ವನಿ ಎತ್ತದಿದ್ದರೆ ದೇವರಿಗೆ ಮಾಡುವ ಅವಮಾನವಾಗಿದೆ.ಶಾಸಕ ಸುನಿಲ್ ಕುಮಾರ್ ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದ್ದಾರೆ, ಆಗಿನ ಸರ್ಕಾರವೂ ಇದರಲ್ಲಿ ಶಾಮೀಲಾಗಿದೆ ಗೊತ್ತಿದ್ರೂ ಸಿಎಂ ಯಾಕೆ ಅನಧಿಕೃತ ಕೆಲಸ ಉದ್ಘಾಟನೆಗೆ ಬಂದಿದ್ರು? ಕಾಂಗ್ರೆಸ್ ಒಂದು ವೇಳೆ ಮಾಡ್ತಿದ್ದರೆ ಜಿಲ್ಲೆಗೆ ಬೆಂಕಿ ಹಾಕ್ತಿದ್ರು ಎಂದ ಅವರು ಇಡೀ ವಿಶ್ವದಲ್ಲಿ ದೇವರ ನಕಲಿ ಪ್ರತಿಮೆ ಸೃಷ್ಟಿಸಿ ಮೋಸ ಯಾರೂ ಮಾಡಲು ಸಾಧ್ಯವಿಲ್ಲ. 14 ಕೋಟಿ ಜನರ ಹಣ ವಂಚನೆ ಆಗಿದೆ. ಇಷ್ಡು ಗಂಭೀರ ವಿಚಾರ ಬಿಟ್ಟು ಏನೇನೋ ಆರೋಪ ಮಾಡ್ತಾರಲ್ಲ ಇದಕ್ಕೆ ಸುನೀಲ್ ಕುಮಾರ್ ಉತ್ತರ ನೀಡಲಿ. ತರಾತುರಿಯಲ್ಲಿ ಒಂದು ದಿನದಲ್ಲಿ‌ ಫೈಬರ್ ಪ್ರತಿಮೆ ಮಾಡಲು ಸಾಧ್ಯವಾ? ಉದ್ದೇಶ ಪೂರ್ವಕವಾಗಿ ಮಾಡಿರುವಂಥದ್ದು. ಚುನಾವಣೆಗಾಗಿ ಧರ್ಮದ ಹೆಸರಿನಲ್ಲಿ ಜನರ ಭಾವನೆಗ ಧಕ್ಕೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಉನ್ನತ ತನಿಖೆ ಮಾಡುದಾಗಿ ಹೇಳಿದ್ದಾರೆ. ಲೋಕಾಯುಕ್ತಕ್ಕೂ ಹೋರಾಟಗಾರರು ದೂರು ನೀಡಿದಾರೆ. ಇನ್ನು ಪ್ರತಿಮೆ ಪೂರ್ಣ ಮಾಡೋದು ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ್ದು. ಅದು ಮಾಡೇ ಮಾಡ್ತೇವೆ. ಹೊರಾಟಕ್ಕೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತೇನೆ. ನಾನು ಈ ವಿಚಾರ ಇಲ್ಲಿಗೇ ನಿಲ್ಲಿಸಲ್ಲ. ಎಲ್ಲ ಮಠಗಳಿಗೆ ಹೋಗಿ‌ ಈ ಅಧರ್ಮದ ವಿರುದ್ಧ ಬೆಂಬಲ ಕೋರುತ್ತೇನೆ ಮತ್ತು ನ್ಯಾಯ ಸಿಗುವ ವರೆಗೂ ಹೋರಾಟ ಮಾಡುತ್ತೆನೆ ಎಂದ್ರು. ವಿಶ್ವಾಸ್ ದಾಸ್,ಅನಿಲ್ ಪೂಜಾರಿ,ಪ್ರವೀಣ್ ಚಂದ್ರ ಆಳ್ವಾ,ಪ್ರಕಾಶ್ ಸಾಲಿಯಾನ್, ಕಾರ್ಕಳ ಪುರಸಭೆ ಸದಸ್ಯ ಶುಬೋಧ್, ದುರ್ಗಾ ಪ್ರಸಾದ್, ರಾಕೇಶ್ ದೇವಾಡಿಗ ಮತ್ತಿತರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

About The Author

Leave a Reply