
ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭಾ ಅವರಣದಲ್ಲಿರುವ ವೀರ್ ಸಾವರ್ಕರ್ ವನ್ನು ತಗೆದು ಹಾಕುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಅಡಳಿತದಲ್ಲಿ ಇದ್ದ ವೇಳೇಯಲ್ಲಿ ವೀರ್ ಸಾವರ್ಕರ್ ಮತ್ತು ವಿವಿಧ ನಾಯಕರನ್ನು ಒಳಗೊಂಡ 7 ಫೋಟೋಗಳನ್ನು ಸ್ಪೀಕರ್ ಅನಾವರಣ ಮಾಡಲಾಗಿತ್ತು.



ಸಾವರ್ಕರ್ ಫೋಟೋವನ್ನು ಸ್ಪೀಕರ್ ಆಸನದ ಎಡಭಾಗದಲ್ಲಿ ಅಳವಡಿಸಲಾಗಿದೆ.
ಆ ವೇಳೆಯಲ್ಲಿ ಆಗಿನ ವಿಪ ವಾಗಿದ್ದ ಕಾಂಗ್ರೆಸ್ ಬ್ರಿಟಿಷರಿಗೆ ಕ್ಷಮೆ ಕೇಳಿದ್ದ ಸಾರ್ವಕರ್ ಅವರ ಫೋಟೋವನ್ನು ಅಳವಡಿಕೆ ಮಾಡುವದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈಗ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದು,ಈಗ ಸಾರ್ವಕರ್ ಫೋಟೋವನ್ನು ವಿಧಾನಸಭೆಯಿಂದ ಹೊರಗೆ ಇಡುವುದಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ನಡುವೆ . ಆಜಾಗದಲ್ಲಿ ನೆಹರೂ ಪೋಟೋ ಅಳವಡಿಸಲು ಉದ್ದೇಶಿಸಲಾಗಿದ್ದು, ಅಧಿವೇಶನ ಆರಂಭದಲ್ಲೇ ಇದರ ಅನಾವರಣ ಸಾಧ್ಯತೆ ಇದೆಯಂತೆ.