
ಕನ್ಯಾನ: ಕನ್ಯಾನ ಗ್ರಾಮ ಪಂಚಾಯತ್ ಮತ್ತು ಪಶು ಸಂಗೋಪನಾ ಇಲಾಖೆ ವಿಟ್ಲ ಇದರ ವತಿಯಿಂದ ಸಾಕು ನಾಯಿಗಳಿಗೆ ಉಚಿತ ಹುಚ್ಚು ನಿರೋಧಕ ಲಸಿಕೆಯನ್ನು ಶುಕ್ರವಾರ ಹಾಕಲಾಯಿತು.



ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 138 ನಾಯಿಗಳಿಗೆ ರೇಬಿಸ್ ಲಸಿಕೆಯನ್ನು ಪಶುವೈದ್ಯರು ಹಾಕಿದರು.
ಬೇರೆ ಬೇರೆ ತಳಿಯ ಸಾಕು ನಾಯಿಗಳ ಜತೆಗೆ, ತಮ್ಮ ಮನೆ ಮುಂದೆ ಇರುವಂಥ ಬೀದಿ ನಾಯಿಗಳನ್ನು ಕೆಲವರು ತಂದು ಲಸಿಕೆ ಹಾಕಿಸಿದರು.
ಈ ಸಂದರ್ಭದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಖಾ ರಮೇಶ್, ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್,ಸದಸ್ಯರಾದ ಅಬ್ದುಲ್ ಮಜೀದ್ ಕನ್ಯಾನ, ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಸಂತಿ,ಮುಖ್ಯ ಪಶು ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.