ಮಂಗಳೂರು:ಕಾರಿನಡಿಗೆ ಬಿದ್ದು ಮಗು ಸಾವು

ಮಂಗಳೂರು: ಕಾರಿನಡಿಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಕಾಸರಗೋಡಿನ ಉಪ್ಪಳದ ಸೋಂಕಾಲ್ ನಲ್ಲಿ ನಡೆದಿದೆ.

ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಇದ್ದ ಮಗು ಗಮನಿಸದೇ ಅವಘಡ ಸಂಭವಿಸಿದೆ.ಮಗುವಿನ ಅಜ್ಜ ಕಾರು ಚಲಾಯಿಸಿಕೊಂಡು ಬರುತ್ತಿರುವಾಗ ಮನೆಯಂಗಳದಲ್ಲಿ ಇದ್ದ ಮಗು ಕಾರಿನಡಿಗೆ ಬಿದ್ದು ಮೃತಪಟ್ಟಿದೆ. ಘಟನೆ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave a Reply