Visitors have accessed this post 285 times.

ಕಾಶ್ಮೀರಿ ಪಂಡಿತರ ಅಂತಿಮ ವಿಧಿಗಳನ್ನು ನೆರವೇರಿಸಲು ನೆರವು ನೀಡಿ ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು

Visitors have accessed this post 285 times.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೋಮು ಸೌಹಾರ್ದತೆಯ ವೈಭವದ ಸಂಪ್ರದಾಯಗಳ ನೆನಪುಗಳನ್ನು ಪುನರುಜ್ಜೀವನಗೊಳಿಸಿ, ಈ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಮಂಗಳವಾರ ಸಂಜೆ ನಿಧನರಾದ ಕಾಶ್ಮೀರಿ ಪಂಡಿತರ ಅಂತಿಮ ವಿಧಿಗಳನ್ನು ನೆರವೇರಿಸಲು ಸಹಾಯ ಮಾಡಿದರು. ಅಶೋಕ್ ಕುಮಾರ್ ವಾಂಗೂ ಅವರು ಮಂಗಳವಾರ ಸಂಜೆ 5ರ ಸುಮಾರಿಗೆ ಪಾಂಪೋರ್ ಪಟ್ಟಣದ ಡ್ರಂಗಬಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪಾರ್ಥಿವ ಶರೀರವನ್ನು ಜಮ್ಮುವಿಗೆ ಕೊಂಡೊಯ್ಯುವ ಬದಲು ಕಾಶ್ಮೀರ ಪಂಡಿತ ಸಮುದಾಯ ಇಲ್ಲಿಯೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ನಿರ್ಧರಿಸಿತು. ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ತಮ್ಮ ಪರವಾಗಿ ನಿಂತಿದ್ದಕ್ಕಾಗಿ ಸ್ಥಳೀಯ ಮುಸ್ಲಿಮರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. “ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ಇಲ್ಲಿ ಸೌಹಾರ್ದಯುತವಾಗಿ ವಾಸಿಸುತ್ತಿದ್ದಾರೆ. ನಾವು ಪರಸ್ಪರರ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳುತ್ತೇವೆ” ಎಂದು ವಾಂಗೂ ಅವರ ಬಾಲ್ಯದ ಸಹಪಾಠಿ ಮೊಹಮ್ಮದ್ ಯೂಸುಫ್ ಮಲಿಕ್ ಹೇಳಿದ್ದಾರೆ.

Leave a Reply

Your email address will not be published. Required fields are marked *