
ಮಂಗಳೂರು: ನಗರದ ಬೆಂದೂರ್ ವೆಲ್ ನಲ್ಲಿರುವ ಗ್ಲೋಬಲ್ ಅಕಾಡೆಮಿಯಲ್ಲಿ ಗ್ಲೋಬಲ್ ಸ್ಪೋಕನ್ ಇಂಗ್ಲೀಷ್ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ರಮ್ಯಾ ಆರ್. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಸಂಸ್ಥೆಯ ಟ್ರೈನರ್ಸ್ ಹಾಗೂ ಡೆವಲಪರ್ಸ್ ಗಳ ವರುಷಗಳ ಪ್ರಯತ್ನದ ನಂತರ ಆನ್ ಲೈನ್ ಕೋರ್ಸ್ ಅನ್ನು ಪ್ರಸ್ತುತ ಪಡಿಸಿದ್ದೇವೆ. ಒಟ್ಟು 17 ಹಂತಗಳ ಈ ಕೋರ್ಸ್ ನಲ್ಲಿ ಪ್ರತಿ ಹಂತದಲ್ಲೂ ಆಡಿಯೋ ಮತ್ತು ವಿಡಿಯೋ ಪಾಠಗಳು, ಆಕ್ಟಿವಿಟಿ ರೂಮ್, ಕನ್ವರ್ಸೆಷನ್ ರೂಮ್ಸ್ ಅಸೈನ್ಮೆಂಟ್ ಹೀಗೆ ಬೇರೆ ಬೇರೆ ಹಂತಗಳಿರುತ್ತವೆ. ಬೆಳಿಗ್ಗೆ 5 ರಿಂದ ರಾತ್ರಿ 11ರ ತನಕ
ತರಬೇತಿದಾರರು ಲಭ್ಯವಿರುತ್ತಾರೆ. ಎಲ್ಲ 17 ಹಂತಗಳನ್ನು ಪೂರ್ಣಗೊಳಿಸಿದರೆ ನಿರರ್ಗಳವಾಗಿ ಇಂಗ್ಲೀಷ್ ನಲ್ಲಿ ಮಾತನಾಡಲು ಸಾಧ್ಯವಾಗುತ್ತದೆ.
ಯಾವುದೇ ಒಂದು ಭಾಷೆ ಯನ್ನು ಕಲಿಯ ಬೇಕಾದರೆ ಕೇಳುವುದು ಮತ್ತು ಮಾತನಾಡುವುದು ಅತೀ ಮುಖ್ಯ ಮತ್ತು ಇದು ಈ ಕೋರ್ಸ್ ನ ಪ್ರಮುಖ ಅಂಶ ವಾಗಿದೆ ಎಂದರು. ವಿದ್ಯಾರ್ಥಿ ಗಳಿಗೆ ಕಡಿಮೆ ಬೆಲೆಗೆ ಅತ್ಯಂತ ಪರಿಣಾಮಕಾರಿ ಯಾದ ಸ್ಪೋಕನ್ ಇಂಗ್ಲೀಷ್ ಕೋರ್ಸ್ ಅನ್ನು ನೀಡಿ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಲು ಕಲಿಸುವುದೇ ನಮ್ಮ ಉದ್ದೇಶ ಮತ್ತು ಗುರಿಯಾಗಿದೆ.
ನರ್ಸಿಂಗ್ ಟೆಕ್ನಿಕಲ್ ಟ್ರೈನಿಂಗ್ ಹೀಗೆ ಖಾಸಗಿ ವಿದ್ಯಾ ಸಂಸ್ಥೆಗಳ ವಿದ್ಯಾಥಿಗಳಿಗೆ ರಿಯಾಯಿತಿ ದರ ದಲ್ಲಿ ನಾವು ಕೋರ್ಸ್ ಅನ್ನು ಒದಗಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ತರಬೇತಿದಾರರು ಪ್ರಿಯಾ, ಪ್ರಗತಿ, ಪ್ರೀತಿ, ನೇಹಾ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ವೆಬ್ ಸೈಟ್ www.globalspokenenglish.com ಅನ್ನು ಸಂಪರ್ಕಿಸಬಹುದಾಗಿದೆ.


