November 8, 2025
WhatsApp Image 2023-10-28 at 9.51.49 AM

ಬೆಂಗಳೂರು: ನಾನು ಯಾವುದೇ ವರ್ಗಾವಣೆ ದಂಧೆಯಲ್ಲಿ ತೊಡಗಿಲ್ಲ. ವೈರಲ್ ಆಗಿರುವಂತ ಪುತ್ರ ಡಾ.ಯತೀಂದ್ರ ವೀಡಿಯೋದಲ್ಲಿ ಮಾತನಾಡಿರುವುದು ಸಿಎಸ್‌ಆರ್ ಫಂಡ್ ಬಗ್ಗೆ ಮಾತ್ರ. ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ಒಂದು ವೇಳೆ ಮಾಡಿದ್ದು ಸಾಭೀತು ಪಡಿಸಿದ್ರೇ ರಾಜಕೀಯ ನಿವೃತ್ತಿಯಾಗುವುದಾಗಿ ಸಿಎಂ ಸಿದ್ಧರಾಮಯ್ಯ ಸವಾಲ್ ಹಾಕಿದ್ದಾರೆ.

 

ಇಂದು ಡಾ.ಯತೀಂದ್ರ ವೀಡಿಯೋ ವೈರಲ್ ವಿಚಾರವಾಗಿ ಮಾತನಾಡಿದಂತ ಅವರು, ಯತೀಂದ್ರ ತಮ್ಮ ಜೊತೆಗೆ ಸಿಎಸ್‌ಆರ್ ಫಂಡ್ ಕುರಿತಂತೆ ಮಾತನಾಡಿದ್ದಾರೆ. ಅದರ ಹೊರತಾಗಿ ಬೇರೆನೂ ಇಲ್ಲ. ಆದ್ರೇ ರಾಜಕೀಯ ಕಾರಣಕ್ಕೆ ವಿಪಕ್ಷಗಳು ಆರೋಪ ಮಾಡುತ್ತಿವೆ. ಯಾವುದೇ ವರ್ಗಾವಣೆ ಬಗ್ಗೆ ಮಾತನಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಅಂದಹಾಗೇ ಡಾ.ಯತೀಂದ್ರ ಸಿದ್ಧರಾಮಯ್ಯ ಅವರು ಮೈಸೂರಿನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯೊಂದರಲ್ಲಿ ಸಿಎಂ ಸಿದ್ಧರಾಮಯ್ಯ ಅವರಿಗೆ ಕರೆ ಮಾಡಿ, ನಾನು ಹೇಳಿದಂತ ನಾಲ್ಕೈದು ಜನರಿಗೆ ಮಾತ್ರ ಮಾಡಬೇಕು. ಅದರ ಹೊರತಾಗಿ ಬೇರೆ ಮಾಡಬಾರದು. ಯಾಕೆ ಇಷ್ಟೊಂದು ಕನ್ಫ್ಯೂಜನ್ ಆಗುತ್ತಿದೆ ಎಂಬುದಾಗಿ ಆರ್.ಮಹದೇವ್ ಎಂಬುವರನ್ನು ತರಾಚೆಗೆ ತೆಗೆದುಕೊಂಡಿದ್ದರು. ಈ ವೀಡಿಯೋ ವೈರಲ್ ಆಗಿತ್ತು. ಈ ಬಳಿಕ ವಿಪಕ್ಷಗಳು ವರ್ಗಾವಣೆಯ ದಂಧೆಯಲ್ಲಿ ಸಿಎಂ ಹಾಗೂ ಅವರ ಪುತ್ರ ತೊಡಗಿದ್ದಾರೆ ಎಂಬುದಾಗಿ ಆರೋಪಿಸಿದ್ದರು.

About The Author

Leave a Reply