August 30, 2025
WhatsApp Image 2023-11-17 at 2.54.17 PM

ಬೆಂಗಳೂರು: ಬಳ್ಳಾರಿ ಸಂಸದ ದೇವೇಂದ್ರಪ್ಪ ಮಗನ ವಿರುದ್ಧ ಯುವತಿಯೊಬ್ಬಳು ವಂಚನ ಆರೋಪಿ ಹೊರಿಸಿದ್ದಾಳೆ. ಬಳ್ಳಾರಿ ಸಂಸದ ದೇವೇಂದ್ರಪ್ಪ ಪುತ್ರ ರಂಗನಾಥ್ ವಿರುದ್ಧ ಗಂಭೀರ ಆರೋಪ‌ಕೇಳಿ ಬಂದಿದ್ದು, ಬೆಂಗಳೂರು ಮೂಲದ ಯುವತಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಮೈಸೂರಿನ‌ ಮಹರಾಜ ಕಾಲೆಜಿನಲ್ಲಿ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ ಒಂದೂವರೆ ವರ್ಷದ ಹಿಂದೆ ಸಂತ್ರಸ್ಥೆಗೆ ಪರಿಚಯವಾಗಿದ್ರಂತೆ. ದೂರುದಾರೆಗೆ ಸ್ನೇಹಿತರ ಮೂಲಕ ಲೆಕ್ಟರರ್ ರಂಗನಾಥ್‌ರ ಪರಿಚಯವಾಗಿದ್ದು ನಂತರ ಪರಿಚತ ಪ್ರೇಮಕ್ಕೆ ತಿರುಗಿದೆ. 42 ವರ್ಷದ ರಂಗನಾಥ್ ಗೆ 24 ವರ್ಷದ ಯುವತಿಗೆ ಜೊತೆ ಲವ್ ಶುರುವಾಗಿದ್ದು ಕಳೆದ ಜನವರಿಯಲ್ಲಿ ಮೈಸೂರಿನ ಹೋಟೇಲ್ ನಲ್ಲಿ ಲೈಂಗಿಕ ಸಂಪರ್ಕ ಬೆಳಸಿದ್ರಂತೆ. ನಂತರ ಕೆಲ ಕಾಲ ಚೆನ್ನಾಗಿ ಇದ್ದಾಗ ಮದ್ವೆ ಆಗುವಂತೆ ದೂರುದಾರೆ ಕೇಳಿದ್ಳಂತೆ. ಈ ವೇಳೆ ರಂಗನಾಥ ಸಂತ್ರಸ್ಥೆಯನ್ನು ಅವೈಡ್ ಮಾಡೋಕೆ ಶುರುಮಾಡಿದ್ದು, ಮದ್ವೆ ಆಗಲ್ಲ ಏನ್ ಮಾಡ್ಕೋತ್ಯೋ ಮಾಡ್ಕೋ ಎಂದು ಧಮ್ಕಿ ಹಾಕಿದ್ರಂತೆ. ನಂತರ ರಂಗನಾಥ್ ವಿಚಾರವನ್ನು ಎಂಪಿ ದೇವೆಂದ್ರಪ್ಪ ಗಮನಕ್ಕೆ ಯುವತಿ ತಂದಿದ್ದಾಳೆ. ಈ ವೇಳೆ ಯುವತಿ ವಿರುದ್ಧ ಎಂಪಿ ದೇವೇಂದ್ರಪ್ಪ ಗರಂ ಆಗಿದ್ದು, ಬೇರೆ ದಾರಿ ಕಾಣದೇ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

About The Author

Leave a Reply