
ರಾಜ್ಯದ ಸಾರಥಿಯಾಗಿ, ಜನಪ್ರತಿನಿಧಿಯಾಗಿ ಸೌಜನ್ಯ ಯುತವಾಗಿ ಅವರ ಕಷ್ಟ ಆಲಿಸಬೇಕಿದ್ದಂತ ಸಿಎಂ ಸಿದ್ಧರಾಮಯ್ಯ ಮಾತ್ರ, ಇಂದು ಗರಂ ಆಗಿದ್ದಾರೆ. ಸಾರ್ವಜನಿಕರ ಮನವಿ ಸ್ವೀಕಾರ ವೇಳೆ ವ್ಯಕ್ತಿಯ ಮೇಲೆ ಸಿಎಂ ಸಿದ್ಧರಾಮಯ್ಯ ಗರಂ ಆದಂತ ಘಟನೆ ನಡೆದಿದೆ.



ಹೌದು ವಿಜಯಪುರ ನಗರದ ಪ್ರವಾಸಿ ಮಂದಿರದಲ್ಲಿ ಸಿಎಂ ಸಾರ್ವಜನಿಕರ ಮನವಿ ಸ್ವೀಕಾರ ವೇಳೆ ಸಿಎಂ ಸಿದ್ದರಾಮಯ್ಯ ಕೈಹಿಡಿದು ಜನರು ಜಗ್ಗಿದ್ದು, ಸಿಎಂ ಗರಂ ಆಗಿದ್ದಾರೆ.
ಮನವಿ ಸ್ವೀಕಾರದ ವೇಳೆ ವ್ಯಕ್ತಿಯೋರ್ವರು ಸಿಎಂ ಕೈ ಹಿಡಿದುಕೊಂಡು ಎಳೆದಿದ್ದಾರೆ. ತಾನು ಕೊಟ್ಟ ಮನವಿ ಸಿಎಂ ನೋಡಬೇಕೆಂಬ ಅಪೇಕ್ಷೆಯಿಂದ ಕೈ ಹಿಡಿದು ಎಳೆದಿದ್ದಾರೆ. ಇದರಿಂದ ಸಿಎಂ ಕೋಪಗೊಂಡಿದ್ದು ತಕ್ಷಣವೇ ಭದ್ರತಾ ಸಿಬ್ಬಂದಿ ಅಲರ್ಟ್ ಆಗಿ ಕೈ ಬಿಡಿಸಿದ್ದಾರೆ.